ಶನಿವಾರ - 5 ಸೆಪ್ಟೆಂಬರ್ 2026
ಔಷಧೀಯ ಸಸ್ಯಗಳು

ಒಂದೇ ಹೂದಲ್ಲಿ ಶಿವ-ನಾಗ ರೂಪದ ಅಚ್ಚರಿ

ಸಂಪಾದಕೀಯ ತಂಡ August 2, 20262 ನಿಮಿಷ ಓದು
ಒಂದೇ ಹೂದಲ್ಲಿ ಶಿವ-ನಾಗ ರೂಪದ ಅಚ್ಚರಿ

ನಾಗಲಿಂಗ ಪುಷ್ಪವು ಪ್ರಕೃತಿಯಲ್ಲಿನ ಅತ್ಯಂತ ವಿಶಿಷ್ಟ ಮತ್ತು ಆಕರ್ಷಕ ಹೂಗಳಲ್ಲಿ ಒಂದು. ಇದರ ವೈಜ್ಞಾನಿಕ ಹೆಸರು Couroupita guianensis ಈ ಮರವು ಲೆಸಿಥಿಡೇಸಿಯೆ Lecythidaceae ಕುಟುಂಬಕ್ಕೆ ಸೇರಿದ್ದು, ಮೂಲತಃ ದಕ್ಷಿಣ ಅಮೆರಿಕಾ ಮತ್ತು ಅಮೆಜಾನ್ ಕಾಡು ಪ್ರದೇಶಗಳಿಗೆ ಸೇರಿದದ್ದು. ಆದರೆ ಇಂದಿಗೆ ಭಾರತ ಸೇರಿದಂತೆ ಅನೇಕ ಉಷ್ಣವಲಯ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ.


ನಾಗಲಿಂಗ ಪುಷ್ಪದ ವಿಶೇಷತೆ ಅದರ ರೂಪದಲ್ಲಿ ಇದೆ. ಈ ಹೂವು ಮರದ ಕೊಂಬೆಗಳ ಮೇಲೆ ಅಲ್ಲ, ನೇರವಾಗಿ ಕಾಂಡದ ಮೇಲೆ ಅರಳುತ್ತದೆ. ಈ ರೀತಿಯ ಹೂವುಗಳ ಬೆಳವಣಿಗೆಗೆ ಕಾಲಿಫ್ಲೋರಿ ಎಂದು ಕರೆಯಲಾಗುತ್ತದೆ. ಒಂದು ಮರದಲ್ಲಿ ದಿನಕ್ಕೆ ನೂರಾರು ಹೂಗಳು ಅರಳುವ ಸಾಮರ್ಥ್ಯವಿದೆ, ಕೆಲವೊಮ್ಮೆ 1000ಕ್ಕೂ ಹೆಚ್ಚು ಹೂಗಳು ಒಂದೇ ದಿನದಲ್ಲಿ ಅರಳಬಹುದು ಎಂಬುದು ಆಶ್ಚರ್ಯಕರ ಸಂಗತಿ.


ಈ ಹೂವಿನ ಮಧ್ಯಭಾಗದಲ್ಲಿ ಶಿವಲಿಂಗದಂತಿರುವ ಆಕಾರ ಕಂಡುಬರುತ್ತದೆ. ಅದರ ಮೇಲೆ ನಾಗದ ತಲೆ ಹಾಸಿದಂತೆ ಕಾಣುವ ರಚನೆ ಇರುವುದರಿಂದ ಇದನ್ನು ನಾಗಲಿಂಗ ಎಂದು ಕರೆಯುತ್ತಾರೆ. ಭಾರತದಲ್ಲಿ ಶಿವ ದೇವರಿಗೆ ಈ ಹೂವನ್ನು ಅರ್ಪಿಸುವುದು ಪವಿತ್ರವೆಂದು ನಂಬಲಾಗಿದೆ.
ಈ ಮರವು 25ರಿಂದ 35 ಮೀಟರ್ ಎತ್ತರದವರೆಗೆ ಬೆಳೆಯುತ್ತದೆ. ಇದರ ಹೂವುಗಳು ಸುಗಂಧ ಯುಕ್ತವಾಗಿದ್ದು ವಿಶೇಷವಾಗಿ ಬೆಳಗ್ಗೆ ಮತ್ತು ರಾತ್ರಿ ಹೆಚ್ಚು ಸುಗಂಧ ನೀಡು ತ್ತವೆ. ಆದರೆ ವಿಚಿತ್ರವೆಂದರೆ, ಇದರ ಹಣ್ಣುಗಳಿಗೆ ದುರ್ವಾಸನೆ ಇರುತ್ತದೆ. ಹಣ್ಣುಗಳು ದೊಡ್ಡದು, ಗೋಳಾಕಾರ ದಿದ್ದು, ತೋಪಿನ ಗುಂಡಿನಂತೆ ಕಾಣುವುದರಿಂದ ಇದನ್ನು ಇಂಗ್ಲಿಷ್‌ನಲ್ಲಿ “Cannonball Tree” ಎಂದು ಕರೆಯುತ್ತಾರೆ.


ನಾಗಲಿಂಗ ಮರದ ಹಣ್ಣುಗಳು ಸುಮಾರು 20-25 ಸೆಂ.ಮೀ. ಗಾತ್ರವಿದ್ದು, ಒಳಗೆ ನೂರಾರು ಬೀಜಗಳನ್ನು ಹೊಂದಿರುತ್ತವೆ. ಹಣ್ಣುಗಳು ನೆಲಕ್ಕೆ ಬಿದ್ದಾಗ ಒಡೆದು ಬೀಜಗಳು ಹೊರಬರುತ್ತವೆ. ಈ ಬೀಜಗಳನ್ನು ಕೆಲವು ಪ್ರಾಣಿಗಳು ತಿನ್ನುವುದರಿಂದ ಅವುಗಳ ಮೂಲಕ ಬೀಜ ಪ್ರಸರಣವಾಗುತ್ತದೆ.
ಔಷಧೀಯ ದೃಷ್ಟಿಯಿಂದಲೂ ನಾಗಲಿಂಗ ಮರ ಮಹತ್ವದ್ದಾಗಿದೆ. ಇದರ ಎಲೆ, ಹೂ, ತೊಗಟೆ ಮತ್ತು ಹಣ್ಣುಗಳನ್ನು ಆಯುರ್ವೇದದಲ್ಲಿ ಬಳಸಲಾಗುತ್ತದೆ. ಇದು ಜ್ವರ, ಚರ್ಮ ರೋಗ, ಗಾಯ, ದಂತನೋವು, ಉರಿಯೂತ ಮುಂತಾದ ಸಮಸ್ಯೆಗಳಿಗೆ ಉಪಯುಕ್ತವೆಂದು ಪರಿಗಣಿಸಲಾಗಿದೆ.


ಇದಲ್ಲದೆ ನಾಗಲಿಂಗ ಹೂಗಳಲ್ಲಿ ಇಂಡಿಗೋಟಿನ್ ಮತ್ತು ಇಂಡಿರೂಬಿನ್ ಎಂಬ ರಾಸಾಯನಿಕಗಳು ಇರುವುದರಿಂದ ಪ್ರಕೃತಿಕ ಬಣ್ಣ ತಯಾರಿಕೆಯಲ್ಲಿ ಇದರ ಬಳಕೆ ಕುರಿತು ಸಂಶೋಧನೆ ನಡೆಯುತ್ತಿದೆ.
ಭಾರತದಲ್ಲಿ ಈ ಮರವು ದೇವಾಲಯಗಳ ಸುತ್ತಮುತ್ತ ಸಾಮಾನ್ಯವಾಗಿ ಕಂಡುಬರುತ್ತದೆ. ಇದು ಶೈವ ಸಂಪ್ರದಾಯದಲ್ಲಿ ಪವಿತ್ರವಾದ ಮರವೆಂದು ಪರಿಗಣಿಸಲಾಗುತ್ತದೆ. ಆದರೆ ಈ ಮರವು ಮೂಲತಃ ಭಾರತಕ್ಕೆ ಸೇರಿದ್ದು ಅಲ್ಲ; ಬ್ರಿಟಿಷರು ಇದನ್ನು ಭಾರತಕ್ಕೆ ಪರಿಚಯಿಸಿದರು ಎಂಬುದು ಒಂದು ಅಪರೂಪದ ಮಾಹಿತಿ.
ಒಟ್ಟಾರೆ ನಾಗಲಿಂಗ ಪುಷ್ಪವು ಪ್ರಕೃತಿಯ ಅಚ್ಚರಿ ಮಾತ್ರವಲ್ಲ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಔಷಽಯ ಮಹತ್ವ ಹೊಂದಿರುವ ಅಮೂಲ್ಯ ಸಸ್ಯವಾಗಿದೆ. ಅದರ ವಿಶಿಷ್ಟ ರೂಪ, ಸುಗಂಧ ಮತ್ತು ಪೌರಾಣಿಕ ಸಂಬಂಧಗಳು ಇದನ್ನು ಇನ್ನಷ್ಟು ವಿಶೇಷವಾಗಿಸುತ್ತವೆ.

ಲೇಖನ : ಸನ್ನಿಧಿ ನಿಲೇಕಣಿ


ಹಂಚಿಕೊಳ್ಳಿ ಒಂದೇ ಹೂದಲ್ಲಿ ಶಿವ-ನಾಗ ರೂಪದ ಅಚ್ಚರಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ.
ಸನ್ನಿಧಿ ವಿ.

ನಿಸರ್ಗ ಸನ್ನಿಧಿ ಸಂಪಾದಕೀಯ ತಂಡ

ಪ್ರಕೃತಿ, ಪರಿಸರ, ಸಂಸ್ಕೃತಿ ಮತ್ತು ಪರಂಪರೆಯ ಜ್ಞಾನವನ್ನು ಸರಳ ಮತ್ತು ಜವಾಬ್ದಾರಿಯುತ ಕನ್ನಡದಲ್ಲಿ ಓದುಗರಿಗೆ ತಲುಪಿಸುವ ಪ್ರಯತ್ನ.

ಓದುಗರ ಪ್ರತಿಕ್ರಿಯೆಗಳು (2)

ನಿಮ್ಮ ಪ್ರತಿಕ್ರಿಯೆ ಬರೆಯಿರಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ.

ಮುಂದೆ ಓದಿ

ಸಂಬಂಧಿತ ಲೇಖನಗಳು

ಸರ್ಪಗಂಧ – ಔಷಧಿಗಳ ರಾಣಿ
ಔಷಧೀಯ ಸಸ್ಯಗಳು

ಸರ್ಪಗಂಧ – ಔಷಧಿಗಳ ರಾಣಿ

August 15, 20262 ನಿಮಿಷ ಓದು

ಸರ್ಪಗಂಧ ಸಾವಿರಾರು ವರ್ಷಗಳಿಂದ ಆರೋಗ್ಯ ಕಾಪಾಡುತ್ತಿರುವ ದಿವ್ಯ ಔಷಧಿ.ಇಂಗ್ಲಿಷ್ ಹೆಸರು: ಇಂಡಿಯನ್ ಸ್ನಾಕೇರೂಟ್.ವೈeನಿಕ ಹೆಸರು: ರೌವೋಲ್ಫಿಯಾ ಸೇರಿಪೆಂತಿನ.ಕುಲ: ಆಪೋನ್ಸಿನಸಿಡೆ.ಭಾರತದ ಅರಣ್ಯಗಳಲ್ಲಿ ಬೆಳೆಯುವ ಅನೇಕ ಔಷಧೀಯ ಸಸ್ಯಗಳಲ್ಲಿ ಸರ್ಪಗಂಧ ರೌವೋಲ್ಫಿಯಾ ಸೇರಿಪೆಂತಿನ ಅತ್ಯಂತ ವಿಶಿಷ್ಟ…

ಪೂರ್ಣ ಲೇಖನ
ಮನೆಯಂಗಳದ ಮಹಾಲಕ್ಷ್ಮಿ – ತುಳಸಿ
ಔಷಧೀಯ ಸಸ್ಯಗಳು

ಮನೆಯಂಗಳದ ಮಹಾಲಕ್ಷ್ಮಿ – ತುಳಸಿ

August 15, 20262 ನಿಮಿಷ ಓದು

ಮನೆಯಂಗಳದಲ್ಲಿ ತುಳಸಿ ನೆಟ್ಟಿರುವ ಮನೆಗೆ ಆರೋಗ್ಯ, ಐಶ್ವರ್ಯ ಮತ್ತು ಆಧ್ಯಾತ್ಮಿಕ ಶಾಂತಿ ಸದಾ ನೆಲೆಸಿರುತ್ತದೆ ಎಂಬ ನಂಬಿಕೆ ಭಾರತೀಯ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳಿಂದ ಜೀವಂತವಾಗಿದೆ. ತುಳಸಿ ಕೇವಲ ಔಷಧೀಯ ಸಸ್ಯವಲ್ಲ. ಅದು ಧರ್ಮ,…

ಪೂರ್ಣ ಲೇಖನ
ಅಫ್ರೊಡೈಟಿಯಿಂದ ಮೇರಿಯವರೆಗೆ ರೋಸ್ಮರಿ
ಔಷಧೀಯ ಸಸ್ಯಗಳು

ಅಫ್ರೊಡೈಟಿಯಿಂದ ಮೇರಿಯವರೆಗೆ ರೋಸ್ಮರಿ

August 13, 20265 ನಿಮಿಷ ಓದು

“ಸಮುದ್ರದ ಮಂಜಿನ ಹನಿಗಳಲ್ಲಿ ಹುಟ್ಟಿ, ಪ್ರೀತಿಯ ಕಥೆಗಳಲ್ಲಿ ಅರಳಿ, ನೆನಪುಗಳ ಪುಟಗಳಲ್ಲಿ ಶಾಶ್ವತವಾದ ಸಸ್ಯವೇ ರೋಸ್ಮರಿ!” ಒಂದು ಸಣ್ಣ ಗಿಡ… ಸೂಜಿಯಂತೆ ಕಾಣುವ ಹಸಿರು ಎಲೆಗಳು… ಗಾಳಿಗೆ ಬೆರೆತು ದೂರದವರೆಗೂ ಹರಡುವ ವಿಶಿಷ್ಟ…

ಪೂರ್ಣ ಲೇಖನ
ವಾಟ್ಸಾಪ್ ಗುಂಪಿಗೆ ಸೇರಿ
Translate »