ಶನಿವಾರ - 5 ಸೆಪ್ಟೆಂಬರ್ 2026
ಸಂಸ್ಕೃತಿ ಮತ್ತು ಪರಂಪರೆ

ನಿಸರ್ಗದೊಂದಿಗೆ ಬೆಸೆದ ನಾಗರ ಪಂಚಮಿ

ಸಂಪಾದಕೀಯ ತಂಡ August 19, 20263 ನಿಮಿಷ ಓದು
ನಿಸರ್ಗದೊಂದಿಗೆ ಬೆಸೆದ ನಾಗರ ಪಂಚಮಿ

ನಿಸರ್ಗದ ಸಮದುರ ಸಸ್ಯಶ್ಯಾಮಲ ಮಡಿಲಿನಲ್ಲಿ ಆನಂದದಿಂದ ನಲಿವ ಹಲವಾರು ಜೀವಜಂತು, ಪ್ರಾಣಿ, ಪಕ್ಷಿಗಳು ಈ ಭೂತಾಯಿಯ ಅತ್ಯಮೂಲ್ಯವಾದ ಮಕ್ಕಳಾಗಿದ್ದಾರೆ. ಈ ಒಂದು ಮಹಾಕುಟುಂಬದಲ್ಲಿ ಹಲವಾರು ವಿಷಕಾರಿ ಜಂತುಗಳಿವೆ. 

ಎಲ್ಲರಿಗೂ ತುಂಬಾ ಪರಿಚಿತವಾಗಿರುವ ಜಂತು ಅಂದರೆ ಹಾವು. ಆದರೆ ನಮ್ಮ ಭಾರತೀಯ ಹಿರಿಯ ಸಂಪ್ರದಾಯದಲ್ಲಿ ಇದನ್ನು ಒಂದು ವಿಷಕಾರಿ ಜಂತು ಎಂದು ತಿಳಿಯದೆ, ಇಡೀ ಬ್ರಹ್ಮಾಂಡವನ್ನೇ ಹೊತ್ತು ನಿಂತಿರುವ ಅಪಾರ ಶಕ್ತಿ ಹೊಂದಿರುವ ಶ್ರೀ ವಿಷ್ಣು ಪರಮಾತ್ಮನ ನೆರಳಿಗೆ ನಿಂತತಹ  ಆದಿಶೇಷ ಪೂಜಿಸುವ ಸುಂದರ ದೈವಿಕ ಆರಾಧನೆಯ ಆಚರಣೆ ನಡೆಯುತ್ತದೆ.

ಇದು ಪರಂಪರೆಗಳಿಂದ ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದು, ಒಂದು ಅತ್ಯಂತ ಸಂತೋಷ ಸಂಭ್ರಮದಿಂದ ಆಚರಿಸುವ ಒಂದು ಹಬ್ಬವಾಗಿ ರೂಪಗೊಂಡು, ಕರ್ನಾಟಕದ ಮನೆ-ಮನೆ, ಮನ-ಮನಗಳಲ್ಲಿಯೂ ಆಚರಿಸಲ್ಪಡುವಂತೆ ಪ್ರಕೃತಿಯ ಆರಾಧನೆಗೆ ಒಂದು ಗಟ್ಟಿ ಸಾಕ್ಷಿಯಾಗಿ ಮಿಂಚಿದೆ. ಈ ಸುಂದರ ಸಂಭ್ರಮವೇ ನಾಗರ ಪಂಚಮಿ. ಹೆಣ್ಣುಮಕ್ಕಳ ಮಡಿಲಲ್ಲಿ ಮಗುವಿನ ಮುಗ್ಧ ಸಂತೋಷ ಮೂಡಿಸುವ ಒಂದು ಅತಿ ಆರಾಧನೆಯ ಹಬ್ಬ.

ಇದು ಕರ್ನಾಟಕದಲ್ಲಿ ಒಂದೊಂದು ಭಾಗದಲ್ಲಿಯೂ ಹೂವುಗಳ ವಿಭಿನ್ನ ವರ್ಣಗಳ ಹಾಗೆ ವಿಭಿನ್ನವಾಗಿ ಅರಳಿದೆ. ಆದರೆ ಈ ಒಂದು ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುವ ಒಂದು ಭಾಗವೆಂದರೆ ಉತ್ತರ ಕರ್ನಾಟಕ.  ಇದು ಅತ್ಯಂತ ಗಮನಾರ್ಹವಾಗಿದ್ದು, ಇಂದೆಂದೂ ಕಂಡಿಲ್ಲ. ಆದರೆ ಇಲ್ಲಿ ನಡೆಯುವ ಸಂಭ್ರಮದ ಹಾಗೆ ಕರ್ನಾಟಕದ ಯಾವ ಭಾಗದಲ್ಲಿಯೂ ಇಷ್ಟು ದೊಡ್ಡ ಮಟ್ಟದಲ್ಲಿ ನಡೆಯುವುದಿಲ್ಲ ಎನ್ನುವುದು ವಿಶೇಷವಾಗಿದೆ.

ಶ್ರಾವಣ ಮಾಸದ ಸಮಯದಲ್ಲಿ ಬರುವ ಈ ಹಬ್ಬ ನಾಗದೇವರ ಆರಾಧನೆಯಾಗಿದೆ. ಈ ಹಬ್ಬ ಎರಡು ದಿನಗಳ ಆಚರಣೆಯಾದರೂ, ಅದರ ಸಂಪ್ರದಾಯ, ರೀತಿ-ನೀತಿ, ಆಚರಿಸುವ ಕಟ್ಟುನಿಟ್ಟಿನ ಪದ್ಧತಿಗಳು ಅನೇಕ. ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ದಿನನಿತ್ಯದ ಕೆಲಸಗಳಿಗಿಂತಲೂ ಅತೀವ ಸ್ವಚ್ಛತೆ ಮಾಡಿ, ಉಡುಗೆಯಿಂದ ಹಬ್ಬದ ಅಡುಗೆಗೆ ಸಿದ್ಧರಾಗುತ್ತಾರೆ. ಹಬ್ಬದ ಅಡುಗೆ ಎಂದರೆ ಅವಲಕ್ಕಿ, ಮೊಸರು, ಉತ್ತರ ಕರ್ನಾಟಕದ ಶೈಲಿಯ ಸವಿಯುವ ಸವಿಯನ್ನು , ಹೋಳಿಗೆ, ಉಂಡೆಗಳು, ನಾಗರ ಪಂಚಮಿಯ ಸಿಹಿಯನ್ನು ಹರಡಿಸುವ ಅರಳಿಹಿಟ್ಟು. ಚಪಾತಿ, ರೊಟ್ಟಿ ದಿನನಿತ್ಯದ ಅಡುಗೆಯಲ್ಲಿ ತಮ್ಮ ಸ್ಥಾನಮಾನ ಉಳಿಸಿಕೊಂಡರೂ, ಅಂದಿನ ತಾಳಿಪಟ್ಟು ಅವುಗಳ ಸ್ಥಾನವನ್ನೇರಿ ಮಕ್ಕಳ ಅತಿ ಇಷ್ಟವಾದ ಅಡುಗೆಯಾಗುತ್ತದೆ. ಬದನೆಕಾಯಿ ಪಲ್ಯ ಇದರ ರುಚಿ ಹೆಚ್ಚಿಸುತ್ತದೆ. ಇಂದಿನ ಸಲಾಡ್‌ನ ಓಲ್ಡ್ ವರ್ಶನ್ ಆಗಿರುವ ಕೋಸಂಬರಿಯೂ ಕೂಡ ಇವುಗಳ ಜೊತೆಗೂಡುತ್ತದೆ.

ಇದೆಲ್ಲ ಆದಮೇಲೆ ಬರುತ್ತದೆ ಹಬ್ಬದ ವಿಶೇಷ ಸಿಹಿ.  ಕುಚ್ಚಿದ ಕಡುಬುಗಳು, ಬಾಬು ಬಿಡಿಸಿ ಹೇಳುವುದಾದರೆ ಕುಡಿಸಿದ ಕಡುಬುಗಳು. ಇವೆಲ್ಲ ನೈವೇದ್ಯಕ್ಕೆ ಇಟ್ಟು, ಹೊಸ ಬಟ್ಟೆ ತೊಟ್ಟು, ಒಂದನೆಯ ದಿನ ಮನೆಯ ಹೊರಗಿನ ಹುತ್ತಕ್ಕೆ ಅಥವಾ ಕಲ್ಲಿನ ನಾಗದೇವರ ಮೂರ್ತಿಗೆ ಹತ್ತಿಯಿಂದ ಮಾಡಿದ ಮಾಲೆಯನ್ನು ಏರಿಸಿ, ಕೊಬ್ಬರಿ ಬಟ್ಟಲಿನ ಅಡಿಯಲ್ಲಿ ಸಣ್ಣ ರಂಧ್ರ ಮಾಡಿ, ಅದರಲ್ಲಿ ಹಾವಿನ ಇಷ್ಟ ಪದಾರ್ಥವಾದ ಹಾಲನ್ನು ಸುರಿಯುತ್ತಾರೆ.

ಅದು ಆ ರಂಧ್ರದಿಂದ ಮೂರ್ತಿಯ ಮೇಲೆ ನಯನಮನೋಹರವಾಗಿ, ಅತೀ ಎತ್ತರದಿಂದ ಭೋರ್ಗರೆದು ಧುಮುಕಿ ಸುರಿಯುವ ಹಾಲಿನ ಜಲಪಾತದಂತೆ ಬೀಳುವಾಗ, ಆ ಮನೆಯ ಮಕ್ಕಳು, ಹಿರಿಯರು ಎಲ್ಲರ ಮನಗಳಲ್ಲಿ ನಾಗದೇವನ ಆರಾಧನೆಯ ಭಕ್ತಿ, ಭಾವ, ಸಂತೋಷ, ಇಚ್ಛೆಗಳು ಎಲ್ಲವೂ ಸುಂದರವಾಗಿ ಮೂಡಿ, ಕಣ್ಣುಗಳಲ್ಲಿ ಹೊಳೆಯುವ ಮಿನಚಿನಂತೆ ಕಾಣಬಹುದು. ಈ ರೀತಿ ಹಾಲು ಎರೆಯುವಾಗ ಎಲ್ಲರೂ ಸೇರಿ ಎರೆಯುತ್ತಾರೆ. ಹಾಗೆಯೇ ಮನೆಯ ಮಂದಿ, ಅವರ ಹಿತೈಷಿಗಳು, ಎಲ್ಲರ ಪಾಲು ಎಂದು ಅವರ ಪರವಾಗಿ ಅವರ ಹೆಸರು ಹೇಳಿ ಎರೆಯುವ ಪದ್ಧತಿಯೂ ಕೂಡ ಇದೆ. “ಸರ್ವೇ ಜನಾಃ ಸುಖಿನೋ ಭವಂತು” ಎಂಬ ಭಾವ, ಮಂಗಳ ಮುಟ್ಟುವ ಸಂಪ್ರದಾಯದಿಂದ ಎದ್ದು ಬಂದಿದ್ದೇ ಈ ಎಲ್ಲ ಪೂಜೆ. ಈ ಖುಷಿಯನ್ನು ವರ್ಣಿಸಲು ಮನಸ್ಸು ಖುಷಿಯಾಗುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿ, ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಮನೆಯಲ್ಲೇ ಜೋಕಾಲಿ ಕಟ್ಟಿ ಆಡುವುದು ವಿಶೇಷ.

ಈ ವಿಶೇಷತೆಗಳು ಉತ್ತರ ಕರ್ನಾಟಕದ ಹಳ್ಳಿಗಳ ಸಂಪ್ರದಾಯ, ಜಾನಪದ ಜೀವನವನ್ನು ತನ್ನ ಮಡಿಲಲ್ಲಿ ಹೊತ್ತು, ಎಲೆಯ ಮೇಲಿನ ನೀರಿನ ಜೇನಿನ ಹನಿಯ ಹಾಗೆ ಕಾಪಾಡಿಕೊಂಡು ಬಂದಿದೆ. ಈ ರೀತಿಯ ಸಂಪ್ರದಾಯಗಳೇ ಅಲ್ಲವಾ ಹಳ್ಳಿಯ ಆ ನಿಸರ್ಗ ಸುಂದರತೆಯನ್ನು ಉಳಿಸಿ ಬೆಳೆಸುವ ಬೆಳಕಿನದಾರಿ.

ಲೇಖನ : ಐಶ್ವರ್ಯ ನಾರಾಯಣ ಬಡಿಗೇರ್. ತಡಸ, ಹಾವೇರಿ
ಹಂಚಿಕೊಳ್ಳಿ ನಿಸರ್ಗದೊಂದಿಗೆ ಬೆಸೆದ ನಾಗರ ಪಂಚಮಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ.
ಸನ್ನಿಧಿ ವಿ.

ನಿಸರ್ಗ ಸನ್ನಿಧಿ ಸಂಪಾದಕೀಯ ತಂಡ

ಪ್ರಕೃತಿ, ಪರಿಸರ, ಸಂಸ್ಕೃತಿ ಮತ್ತು ಪರಂಪರೆಯ ಜ್ಞಾನವನ್ನು ಸರಳ ಮತ್ತು ಜವಾಬ್ದಾರಿಯುತ ಕನ್ನಡದಲ್ಲಿ ಓದುಗರಿಗೆ ತಲುಪಿಸುವ ಪ್ರಯತ್ನ.

ನಿಮ್ಮ ಪ್ರತಿಕ್ರಿಯೆ ಬರೆಯಿರಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ.

ಮುಂದೆ ಓದಿ

ಸಂಬಂಧಿತ ಲೇಖನಗಳು

ನಾಗರ ಪಂಚಮಿ ಎಂದರೆ ಜೋಕಾಲಿಯ ನೆನಪು!
ಸಂಸ್ಕೃತಿ ಮತ್ತು ಪರಂಪರೆ

ನಾಗರ ಪಂಚಮಿ ಎಂದರೆ ಜೋಕಾಲಿಯ ನೆನಪು!

August 20, 20263 ನಿಮಿಷ ಓದು

ನಾಗರ ಪಂಚಮಿ ಎಂದರೆ ಕೇವಲ ನಾಗದೇವರ ಆರಾಧನೆಯ ಹಬ್ಬವಲ್ಲ; ಗ್ರಾಮೀಣ ಬದುಕಿನ ಸಂಭ್ರಮ, ಹೆಣ್ಣುಮಕ್ಕಳ ಬಾಲ್ಯದ ನೆನಪು, ಜೋಕಾಲಿಯ ಜೀಕಾಟ ಮತ್ತು ಅಕ್ಕ-ತಂಗಿಯರ ನಗುವಿನೊಂದಿಗೆ ಬೆಸೆದುಕೊಂಡಿರುವ ಅಪೂರ್ವ ಸಾಂಸ್ಕೃತಿಕ ಹಬ್ಬವೂ ಹೌದು. ಶ್ರಾವಣ…

ಪೂರ್ಣ ಲೇಖನ
ನಾಗಾರಾಧನೆಯ ಹಿಂದಿನ ನಿಗೂಢ ಕಥೆ!
ಸಂಸ್ಕೃತಿ ಮತ್ತು ಪರಂಪರೆ

ನಾಗಾರಾಧನೆಯ ಹಿಂದಿನ ನಿಗೂಢ ಕಥೆ!

August 20, 20267 ನಿಮಿಷ ಓದು

ಶ್ರಾವಣ ಮಾಸ ಬಂದರೆ ಸಾಕು, ಹಳ್ಳಿಗಳಿಂದ ಹಿಡಿದು ನಗರಗಳವರೆಗೆ ಹಬ್ಬದ ಸಂಭ್ರಮ ಮನೆ ಮಾಡುತ್ತದೆ. ಹಸಿರು ಹೊದ್ದಿರುವ ಭೂಮಿ, ಮಳೆಗಾಲದ ತಂಪು, ಮನೆಯಂಗಳದಲ್ಲಿ ರಂಗೋಲಿ, ಹೂವಿನ ಅಲಂಕಾರ, ನಾಗರ ಹುತ್ತದ ಮುಂದೆ ನಡೆಯುವ…

ಪೂರ್ಣ ಲೇಖನ
ಮನೆಯಂಗಳದ ಮಹಾಲಕ್ಷ್ಮಿ – ತುಳಸಿ
ಔಷಧೀಯ ಸಸ್ಯಗಳು

ಮನೆಯಂಗಳದ ಮಹಾಲಕ್ಷ್ಮಿ – ತುಳಸಿ

August 15, 20262 ನಿಮಿಷ ಓದು

ಮನೆಯಂಗಳದಲ್ಲಿ ತುಳಸಿ ನೆಟ್ಟಿರುವ ಮನೆಗೆ ಆರೋಗ್ಯ, ಐಶ್ವರ್ಯ ಮತ್ತು ಆಧ್ಯಾತ್ಮಿಕ ಶಾಂತಿ ಸದಾ ನೆಲೆಸಿರುತ್ತದೆ ಎಂಬ ನಂಬಿಕೆ ಭಾರತೀಯ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳಿಂದ ಜೀವಂತವಾಗಿದೆ. ತುಳಸಿ ಕೇವಲ ಔಷಧೀಯ ಸಸ್ಯವಲ್ಲ. ಅದು ಧರ್ಮ,…

ಪೂರ್ಣ ಲೇಖನ
ವಾಟ್ಸಾಪ್ ಗುಂಪಿಗೆ ಸೇರಿ
Translate »