ಶನಿವಾರ - 5 ಸೆಪ್ಟೆಂಬರ್ 2026
ಔಷಧೀಯ ಸಸ್ಯಗಳು

ಮನೆಯಂಗಳದ ಮಹಾಲಕ್ಷ್ಮಿ – ತುಳಸಿ

ಸಂಪಾದಕೀಯ ತಂಡ August 15, 20262 ನಿಮಿಷ ಓದು
ಮನೆಯಂಗಳದ ಮಹಾಲಕ್ಷ್ಮಿ – ತುಳಸಿ

ಮನೆಯಂಗಳದಲ್ಲಿ ತುಳಸಿ ನೆಟ್ಟಿರುವ ಮನೆಗೆ ಆರೋಗ್ಯ, ಐಶ್ವರ್ಯ ಮತ್ತು ಆಧ್ಯಾತ್ಮಿಕ ಶಾಂತಿ ಸದಾ ನೆಲೆಸಿರುತ್ತದೆ ಎಂಬ ನಂಬಿಕೆ ಭಾರತೀಯ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳಿಂದ ಜೀವಂತವಾಗಿದೆ. ತುಳಸಿ ಕೇವಲ ಔಷಧೀಯ ಸಸ್ಯವಲ್ಲ. ಅದು ಧರ್ಮ, ಸಂಸ್ಕೃತಿ, ವಿಜ್ಞಾನ ಮತ್ತು ಪರಿಸರದೊಂದಿಗೆ ಬೆಸೆದು ಕೊಂಡಿರುವ ಪವಿತ್ರ ಸಸ್ಯವಾಗಿದೆ.
ಭಾರತದ ಬಹುತೇಕ ಮನೆಗಳ ಮುಂಭಾಗದಲ್ಲಿ ತುಳಸಿ ಕಟ್ಟೆ ಕಾಣುವುದು ಸಾಮಾನ್ಯ. ಬೆಳಿಗ್ಗೆ ಮತ್ತು ಸಂಜೆ ತುಳಸಿಗೆ ದೀಪ ಹಚ್ಚಿ ಪೂಜೆ ಸಲ್ಲಿಸುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ತುಳಸಿ ಗಾಳಿಯನ್ನು ಶುದ್ಧೀಕರಿಸುವುದರ ಜೊತೆಗೆ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಹಸನಾಗಿಸುತ್ತದೆ.
ಪುರಾಣಗಳ ಪ್ರಕಾರ ತುಳಸಿಯು ವೃಂದಾ ದೇವಿಯ ರೂಪವಾಗಿದೆ. ವೃಂದೆಯ ಪತಿಭಕ್ತಿಯಿಂದ ಸಂತುಷ್ಟರಾದ ಶ್ರೀಮಹಾವಿಷ್ಣುವು ಆಕೆಗೆ ಭೂಮಿಯಲ್ಲಿ ಸದಾಕಾಲ ಪೂಜಿಸಲ್ಪಡುವ ವರವನ್ನು ನೀಡಿದರು. ಅದರಿಂದಲೇ ತುಳಸಿಯನ್ನು ವಿಷ್ಣುವಿನ ಅತಿ ಪ್ರಿಯ ಸಸ್ಯವೆಂದು ಪರಿಗಣಿಸಲಾಗಿದೆ. ಕಾರ್ತಿಕ ಮಾಸದಲ್ಲಿ ಆಚರಿಸುವ ತುಳಸಿ ವಿವಾಹವು ವಿಷ್ಣು ಮತ್ತು ತುಳಸಿಯ ದೈವಿಕ ಸಂಗಮದ ಸಂಕೇತವಾಗಿದೆ. ಈ ದಿನದಿಂದ ಹಿಂದೂ ಧರ್ಮದಲ್ಲಿ ಶುಭ ಕಾರ್ಯಗಳ ಆರಂಭವಾಗುತ್ತದೆ ಎಂಬ ನಂಬಿಕೆಯಿದೆ.
ಇತಿಹಾಸದ ಪುಟಗಳಲ್ಲಿಯೂ ತುಳಸಿಯ ಮಹತ್ವ ಸ್ಪಷ್ಟವಾಗಿದೆ. ಆಯುರ್ವೇದದ ಮಹಾಗ್ರಂಥಗಳಾದ ಚರಕ ಸಂಹಿತೆ ಮತ್ತು ಸುಶ್ರುತ ಸಂಹಿತೆಗಳಲ್ಲಿ ತುಳಸಿಯನ್ನು ಅನೇಕ ರೋಗಗಳಿಗೆ ಔಷಧಿಯಾಗಿ ಉಲ್ಲೇಖಿಸಲಾಗಿದೆ. ಜ್ವರ, ಕೆಮ್ಮು, ಶೀತ, ಉಸಿರಾಟದ ತೊಂದರೆ, ಜೀರ್ಣಕ್ರಿಯೆಯ ಸಮಸ್ಯೆ ಸೇರಿದಂತೆ ಹಲವು ಕಾಯಿಲೆಗಳಿಗೆ ತುಳಸಿಯನ್ನು ಮನೆಮzಗಿ ಬಳಸಲಾಗುತ್ತಿತ್ತು.
ವೈಜ್ಞಾನಿಕವಾಗಿ ತುಳಸಿಯಲ್ಲಿ ಯೂಜೆನಾಲ್, ಉರ್ಸೋಲಿಕ್ ಆಮ್ಲ ಹಾಗೂ ಹಲವು ಆಂಟಿಆಕ್ಸಿಡೆಂಟ್ ಸಂಯುಕ್ತಗಳಿವೆ. ಇವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಉರಿಯೂತವನ್ನು ಕಡಿಮೆ ಮಾಡಲು ಹಾಗೂ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ಧ ಹೋರಾಡಲು ನೆರವಾಗುತ್ತವೆ. ತುಳಸಿ ಎಲೆಗಳಿಂದ ತಯಾರಿಸುವ ಕಷಾಯ ಮತ್ತು ಚಹಾ ಆರೋಗ್ಯಕ್ಕೆ ಉಪಯುಕ್ತವೆಂದು ಪರಿಗಣಿಸಲಾಗಿದೆ.
ತುಳಸಿಯ ಪ್ರಮುಖ ವಿಧಗಳಲ್ಲಿ ರಾಮ ತುಳಸಿ, ಕೃಷ್ಣ ತುಳಸಿ ಮತ್ತು ವನ ತುಳಸಿ ಪ್ರಸಿದ್ಧವಾಗಿವೆ. ಪ್ರತಿಯೊಂದು ವಿಧವೂ ತನ್ನದೇ ಆದ ಔಷಧೀಯ ಗುಣಗಳನ್ನು ಹೊಂದಿದೆ. ಕೃಷ್ಣ ತುಳಸಿಯ ಎಲೆಗಳು ನೇರಳೆ ಬಣ್ಣ ಹೊಂದಿದ್ದು, ರಾಮ ತುಳಸಿಯ ಎಲೆಗಳು ಹಸಿರು ಬಣ್ಣದಲ್ಲಿರುತ್ತವೆ.
ಪರಿಸರದ ದೃಷ್ಟಿಯಿಂದಲೂ ತುಳಸಿಯ ಪಾತ್ರ ಮಹತ್ವzಗಿದೆ. ಇದರ ಹೂಗಳು ಜೇನುನೊಣಗಳು ಮತ್ತು ಚಿಟ್ಟೆಗಳನ್ನು ಆಕರ್ಷಿಸಿ ಪರಾಗಸ್ಪರ್ಶ ಕ್ರಿಯೆಗೆ ನೆರವಾಗುತ್ತವೆ. ಇದರಿಂದ ಜೀವವೈವಿಧ್ಯ ಸಂರಕ್ಷಣೆಯಲ್ಲಿಯೂ ತುಳಸಿ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ.
ಆಧುನಿಕ ಜೀವನಶೈಲಿಯಲ್ಲಿ ಅನೇಕ ಔಷಧಗಳು ಲಭ್ಯವಿದ್ದರೂ, ಪ್ರಕೃತಿಯ ಕೊಡುಗೆಯಾದ ತುಳಸಿಯ ಮಹತ್ವ ಕಡಿಮೆಯಾಗಿಲ್ಲ. ಮನೆ ಅಂಗಳದಂದು ತುಳಸಿ ಗಿಡ ಬೆಳೆಸುವುದು ಆರೋಗ್ಯ, ಪರಿಸರ ಮತ್ತು ಆಧ್ಯಾತ್ಮಿಕ ಬದುಕಿನತ್ತ ಇಡುವ ಸಣ್ಣ ಆದರೆ ಮಹತ್ವದ ಹೆಜ್ಜೆಯಾಗಿದೆ.
ತುಳಸಿ ಕೇವಲ ಒಂದು ಸಸ್ಯವಲ್ಲ. ಅದು ಭಾರತೀಯ ಸಂಸ್ಕೃತಿಯ ಉಸಿರು, ಭಕ್ತಿಯ ಸಂಕೇತ, ಆರೋಗ್ಯದ ನಿಧಿ ಮತ್ತು ಪ್ರಕೃತಿಯ ಅಮೂಲ್ಯ ವರವಾಗಿದೆ.

ಲೇಖನ : ಸನ್ನಿಧಿ,
ಮುಖ್ಯ ಸಂಪಾದಕರು,
ನಿಸರ್ಗ ಸನ್ನಿಧಿ.


ಹಂಚಿಕೊಳ್ಳಿ ಮನೆಯಂಗಳದ ಮಹಾಲಕ್ಷ್ಮಿ – ತುಳಸಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ.
ಸನ್ನಿಧಿ ವಿ.

ನಿಸರ್ಗ ಸನ್ನಿಧಿ ಸಂಪಾದಕೀಯ ತಂಡ

ಪ್ರಕೃತಿ, ಪರಿಸರ, ಸಂಸ್ಕೃತಿ ಮತ್ತು ಪರಂಪರೆಯ ಜ್ಞಾನವನ್ನು ಸರಳ ಮತ್ತು ಜವಾಬ್ದಾರಿಯುತ ಕನ್ನಡದಲ್ಲಿ ಓದುಗರಿಗೆ ತಲುಪಿಸುವ ಪ್ರಯತ್ನ.

ನಿಮ್ಮ ಪ್ರತಿಕ್ರಿಯೆ ಬರೆಯಿರಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ.

ಮುಂದೆ ಓದಿ

ಸಂಬಂಧಿತ ಲೇಖನಗಳು

ಸರ್ಪಗಂಧ – ಔಷಧಿಗಳ ರಾಣಿ
ಔಷಧೀಯ ಸಸ್ಯಗಳು

ಸರ್ಪಗಂಧ – ಔಷಧಿಗಳ ರಾಣಿ

August 15, 20262 ನಿಮಿಷ ಓದು

ಸರ್ಪಗಂಧ ಸಾವಿರಾರು ವರ್ಷಗಳಿಂದ ಆರೋಗ್ಯ ಕಾಪಾಡುತ್ತಿರುವ ದಿವ್ಯ ಔಷಧಿ.ಇಂಗ್ಲಿಷ್ ಹೆಸರು: ಇಂಡಿಯನ್ ಸ್ನಾಕೇರೂಟ್.ವೈeನಿಕ ಹೆಸರು: ರೌವೋಲ್ಫಿಯಾ ಸೇರಿಪೆಂತಿನ.ಕುಲ: ಆಪೋನ್ಸಿನಸಿಡೆ.ಭಾರತದ ಅರಣ್ಯಗಳಲ್ಲಿ ಬೆಳೆಯುವ ಅನೇಕ ಔಷಧೀಯ ಸಸ್ಯಗಳಲ್ಲಿ ಸರ್ಪಗಂಧ ರೌವೋಲ್ಫಿಯಾ ಸೇರಿಪೆಂತಿನ ಅತ್ಯಂತ ವಿಶಿಷ್ಟ…

ಪೂರ್ಣ ಲೇಖನ
ಅಫ್ರೊಡೈಟಿಯಿಂದ ಮೇರಿಯವರೆಗೆ ರೋಸ್ಮರಿ
ಔಷಧೀಯ ಸಸ್ಯಗಳು

ಅಫ್ರೊಡೈಟಿಯಿಂದ ಮೇರಿಯವರೆಗೆ ರೋಸ್ಮರಿ

August 13, 20265 ನಿಮಿಷ ಓದು

“ಸಮುದ್ರದ ಮಂಜಿನ ಹನಿಗಳಲ್ಲಿ ಹುಟ್ಟಿ, ಪ್ರೀತಿಯ ಕಥೆಗಳಲ್ಲಿ ಅರಳಿ, ನೆನಪುಗಳ ಪುಟಗಳಲ್ಲಿ ಶಾಶ್ವತವಾದ ಸಸ್ಯವೇ ರೋಸ್ಮರಿ!” ಒಂದು ಸಣ್ಣ ಗಿಡ… ಸೂಜಿಯಂತೆ ಕಾಣುವ ಹಸಿರು ಎಲೆಗಳು… ಗಾಳಿಗೆ ಬೆರೆತು ದೂರದವರೆಗೂ ಹರಡುವ ವಿಶಿಷ್ಟ…

ಪೂರ್ಣ ಲೇಖನ
ಒಂದೇ ಹೂದಲ್ಲಿ ಶಿವ-ನಾಗ ರೂಪದ ಅಚ್ಚರಿ
ಔಷಧೀಯ ಸಸ್ಯಗಳು

ಒಂದೇ ಹೂದಲ್ಲಿ ಶಿವ-ನಾಗ ರೂಪದ ಅಚ್ಚರಿ

August 2, 20262 ನಿಮಿಷ ಓದು

ನಾಗಲಿಂಗ ಪುಷ್ಪವು ಪ್ರಕೃತಿಯಲ್ಲಿನ ಅತ್ಯಂತ ವಿಶಿಷ್ಟ ಮತ್ತು ಆಕರ್ಷಕ ಹೂಗಳಲ್ಲಿ ಒಂದು. ಇದರ ವೈಜ್ಞಾನಿಕ ಹೆಸರು Couroupita guianensis ಈ ಮರವು ಲೆಸಿಥಿಡೇಸಿಯೆ Lecythidaceae ಕುಟುಂಬಕ್ಕೆ ಸೇರಿದ್ದು, ಮೂಲತಃ ದಕ್ಷಿಣ ಅಮೆರಿಕಾ ಮತ್ತು…

ಪೂರ್ಣ ಲೇಖನ
ವಾಟ್ಸಾಪ್ ಗುಂಪಿಗೆ ಸೇರಿ
Translate »