ಸೋಮವಾರ - 16 ನವೆಂಬರ್ 2026
ನಿಸರ್ಗ ಸಂರಕ್ಷಣೆ

ಇಂದು ‘ವಿಶ್ವ ನದಿಗಳ ದಿನ’

ಸಂಪಾದಕೀಯ ತಂಡ October 11, 20262 ನಿಮಿಷ ಓದು
ಇಂದು ‘ವಿಶ್ವ ನದಿಗಳ ದಿನ’

ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ನಾಲ್ಕನೇ ಭಾನುವಾರದಂದು ವಿಶ್ವ ನದಿಗಳ ದಿನವನ್ನು (World Rivers Day) ಆಚರಿಸಲಾಗುತ್ತದೆ. *ಪ್ರಮುಖ ಉದ್ದೇಶ:*
ನದಿಗಳ ಮಹತ್ವವನ್ನು ತಿಳಿಸುವುದು, ನದಿಗಳ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವುದು ಮತ್ತು ನದಿಗಳ ಸಂರಕ್ಷಣೆಗೆ ಒತ್ತು ನೀಡುವುದು.
*ದಿನಾಚರಣೆಯ ಪ್ರಾರಂಭ:*
ಇದನ್ನು 2005ರಲ್ಲಿ ಕೆನಡಾದ ನದಿ ಸಂರಕ್ಷಕರಾದ ಮಾರ್ಕ್ ಆಂಜೆಲೊ (Mark Angelo) ಅವರ ನೇತೃತ್ವದಲ್ಲಿ ಆರಂಭಿಸಲಾಯಿತು.
*ಆಚರಣೆ:*
ನೂರಕ್ಕೂ ಹೆಚ್ಚು ದೇಶಗಳಲ್ಲಿ ನದಿ ಸ್ವಚ್ಛತಾ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು ಹಾಗೂ ಜಾಗೃತಿ ಜಾಥಾಗಳನ್ನು ನಡೆಸಲಾಗುತ್ತದೆ.

ಮೇಲಿನ ಫೋಟೋ ತಿಂಗಳ ಹಿಂದಿನ  ‘ಬೇಡ್ತಿ’ ನದಿಯ ಕರುಣಾಜನಕ ಸ್ಥಿತಿಯನ್ನು ತೋರಿಸುತ್ತದೆ. ನದಿ ಮೂಲಗಳು ಮತ್ತು ನದಿಗಳ ಸಂರಕ್ಷಣೆ ನಮ್ಮ ಪ್ರಥಮ ಆದ್ಯತೆ ಆಗಬೇಕಿದೆ.

ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||
ಇದು ಸ್ನಾನ ಮಾಡುವಾಗ ಅಥವಾ ಪವಿತ್ರ ಜಲವನ್ನು ಸ್ಪರ್ಶಿಸುವಾಗ ಸ್ನಾನದ ಮಂತ್ರವಾಗಿ ಪಠಿಸುವ ಪ್ರಸಿದ್ಧ ಸಂಸ್ಕೃತ ಶ್ಲೋಕವಾಗಿದೆ. 

ಸತ್ಯನಾರಾಯಣ ಜಿ.ಹೆಗಡೆ.
ಹಂಚಿಕೊಳ್ಳಿ ಇಂದು ‘ವಿಶ್ವ ನದಿಗಳ ದಿನ’ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ.
ಸನ್ನಿಧಿ ವಿ.

ನಿಸರ್ಗ ಸನ್ನಿಧಿ ಸಂಪಾದಕೀಯ ತಂಡ

ಪ್ರಕೃತಿ, ಪರಿಸರ, ಸಂಸ್ಕೃತಿ ಮತ್ತು ಪರಂಪರೆಯ ಜ್ಞಾನವನ್ನು ಸರಳ ಮತ್ತು ಜವಾಬ್ದಾರಿಯುತ ಕನ್ನಡದಲ್ಲಿ ಓದುಗರಿಗೆ ತಲುಪಿಸುವ ಪ್ರಯತ್ನ.

ನಿಮ್ಮ ಪ್ರತಿಕ್ರಿಯೆ ಬರೆಯಿರಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ.

ಮುಂದೆ ಓದಿ

ಸಂಬಂಧಿತ ಲೇಖನಗಳು

ಹಸಿರಿನ ಸಾಮ್ರಾಜ್ಯ ಅಮೆಜಾನ್
ಔಷಧೀಯ ಸಸ್ಯಗಳು

ಹಸಿರಿನ ಸಾಮ್ರಾಜ್ಯ ಅಮೆಜಾನ್

September 7, 20263 ನಿಮಿಷ ಓದು

“ಒಂದು ಕಾಡು ನಾಶವಾದಾಗ ಕೇವಲ ಮರಗಳು ಬೀಳುವುದಿಲ್ಲ; ಅದರೊಂದಿಗೆ ಅನೇಕ ಜೀವಿಗಳ ಮನೆ, ಪ್ರಕೃತಿಯ ಸಮತೋಲನ ಮತ್ತು ಭವಿಷ್ಯದ ಭರವಸೆಯೂ ಕುಸಿಯುತ್ತದೆ.” ಪ್ರಕೃತಿಯ ಹಸಿರು ಹೊದಿಕೆಯಂತೆ ಹರಡಿಕೊಂಡಿರುವ ಅಮೆಜಾನ್ ಮಳೆಕಾಡು ಭೂಮಿಯ ಅತ್ಯಂತ…

ಪೂರ್ಣ ಲೇಖನ →
ಮಗುವಿನ ಜನನ, ಮರದ ಸಂಭ್ರಮ
ನಿಸರ್ಗ ಸಂರಕ್ಷಣೆ

ಮಗುವಿನ ಜನನ, ಮರದ ಸಂಭ್ರಮ

September 7, 20263 ನಿಮಿಷ ಓದು

ರಕ್ಷಾಬಂಧನ ಎಂದರೆ ಸಹೋದರ–ಸಹೋದರಿಯರ ಪ್ರೀತಿ, ಕಾಳಜಿ ಮತ್ತು ರಕ್ಷಣೆಯ ಸಂಕೇತ. ಆದರೆ ಈ ಪವಿತ್ರ ಬಂಧವನ್ನು ಮನುಷ್ಯರ ನಡುವಿನ ಸಂಬಂಧಕ್ಕೆ ಮಾತ್ರ ಸೀಮಿತಗೊಳಿಸದೆ, ಪ್ರಕೃತಿಯೊಂದಿಗೂ ಬೆಸೆಯಬಹುದು ಎಂಬ ಸಂದೇಶವನ್ನು ಸಾರುವ ‘ವೃಕ್ಷ ರಕ್ಷಾ…

ಪೂರ್ಣ ಲೇಖನ →
ಅಫ್ರೊಡೈಟಿಯಿಂದ ಮೇರಿಯವರೆಗೆ ರೋಸ್ಮರಿ
ಔಷಧೀಯ ಸಸ್ಯಗಳು

ಅಫ್ರೊಡೈಟಿಯಿಂದ ಮೇರಿಯವರೆಗೆ ರೋಸ್ಮರಿ

August 13, 20265 ನಿಮಿಷ ಓದು

“ಸಮುದ್ರದ ಮಂಜಿನ ಹನಿಗಳಲ್ಲಿ ಹುಟ್ಟಿ, ಪ್ರೀತಿಯ ಕಥೆಗಳಲ್ಲಿ ಅರಳಿ, ನೆನಪುಗಳ ಪುಟಗಳಲ್ಲಿ ಶಾಶ್ವತವಾದ ಸಸ್ಯವೇ ರೋಸ್ಮರಿ!” ಒಂದು ಸಣ್ಣ ಗಿಡ… ಸೂಜಿಯಂತೆ ಕಾಣುವ ಹಸಿರು ಎಲೆಗಳು… ಗಾಳಿಗೆ ಬೆರೆತು ದೂರದವರೆಗೂ ಹರಡುವ ವಿಶಿಷ್ಟ…

ಪೂರ್ಣ ಲೇಖನ →
ವಾಟ್ಸಾಪ್ ಗುಂಪಿಗೆ ಸೇರಿ
Translate »