ಶನಿವಾರ - 5 ಸೆಪ್ಟೆಂಬರ್ 2026
ಪ್ರೇಕ್ಷಣೀಯ ಸ್ಥಳಗಳು

ಭೀಮನಗುಡ್ಡ: ಪ್ರಕೃತಿಯ ಮಡಿಲಿನಂದು ಅದ್ಭುತ ತಾಣ…

ಸಂಪಾದಕೀಯ ತಂಡ July 25, 20262 ನಿಮಿಷ ಓದು
ಭೀಮನಗುಡ್ಡ: ಪ್ರಕೃತಿಯ ಮಡಿಲಿನಂದು ಅದ್ಭುತ ತಾಣ…

ಉತ್ತರ ಕನ್ನಡ ಜಿಲ್ಲೆಯ ಸಿರಸಿ ತಾಲ್ಲೂಕಿನಲ್ಲಿರುವ ಭೀಮನಗುಡ್ಡ ಪ್ರಕೃತಿ ಸೌಂದರ್ಯ ಮತ್ತು ಪೌರಾಣಿಕ ಮಹತ್ವವನ್ನು ಒಂದೇ ಸಮಯದಲ್ಲಿ ಹೊತ್ತುಕೊಂಡಿರುವ ವಿಶಿಷ್ಟ ಸ್ಥಳವಾಗಿದೆ. ಹಸಿರು ಬೆಟ್ಟಗಳು, ದಟ್ಟವಾದ ಕಾಡು, ಮತ್ತು ತಾಜಾ ಗಾಳಿ ಈ ಪ್ರದೇಶವನ್ನು ಪ್ರವಾಸಿಗರಿಗೆ ಆಕರ್ಷಕವಾಗಿಸುತ್ತದೆ. ಇಲ್ಲಿ ಬರುವವರು ಪ್ರಕೃತಿಯ ಶಾಂತಿಯನ್ನೂ, ಮನಸ್ಸಿಗೆ ನೆಮ್ಮದಿಯನ್ನೂ ಅನುಭವಿಸುತ್ತಾರೆ.
ಭೀಮನಗುಡ್ಡ ಎಂಬ ಹೆಸರಿನ ಹಿಂದೆ ಪೌರಾಣಿಕ ಕತೆ ಇದೆ. ಮಹಾಭಾರತದ ಭೀಮನು ಅರಣ್ಯವಾಸದ ಸಮಯದಲ್ಲಿ ಈ ಪ್ರದೇಶದಲ್ಲಿ ವಾಸಿಸಿದ್ದಾನೆ ಎಂಬ ನಂಬಿಕೆ ಇದೆ. ಭೀಮನು ತನ್ನ ಶಕ್ತಿಯನ್ನು ಪ್ರದರ್ಶಿಸಲು ಇಲ್ಲಿ ದೊಡ್ಡ ಬಂಡೆಗಳನ್ನು ಎತ್ತಿ ಹಾಕಿದನು ಎಂಬ ಕಥೆಗಳು ಜನಮಖಿಕವಾಗಿ ಪ್ರಸಿದ್ಧವಾಗಿವೆ. ಈ ಕಾರಣದಿಂದಲೇ ಈ ಗುಡ್ಡಕ್ಕೆ ಭೀಮನಗುಡ್ಡ ಎಂಬ ಹೆಸರು ಬಂದಿತೆಂದು ಸ್ಥಳೀಯರು ಹೇಳುತ್ತಾರೆ.
ಪ್ರಕೃತಿ ಪ್ರೇಮಿಗಳಿಗೆ ಭೀಮನಗುಡ್ಡ ಸ್ವರ್ಗದಂತಿದೆ. ಬೆಟ್ಟದ ಮೇಲೆ ಏರಿದಾಗ ಕಾಣುವ ಹಸಿರು ಕಣಿವೆಗಳು ಮತ್ತು ದೂರದ ದೃಶ್ಯಗಳು ಮನಸೆಳೆಯುತ್ತವೆ. ವಿಶೇಷವಾಗಿ ಮಳೆಗಾಲದಲ್ಲಿ ಈ ಪ್ರದೇಶ ಇನ್ನಷ್ಟು ಸೊಬಗು ಪಡೆಯುತ್ತದೆ. ಮಂಜು ಆವರಿಸಿದ ಬೆಳಗಿನ ಹೊತ್ತು ಮತ್ತು ಹಕ್ಕಿಗಳ ಕಿಲಕಿಲ ಧ್ವನಿ ಇಲ್ಲಿ ಬರುವವರ ಮನಸ್ಸನ್ನು ಹರ್ಷಗೊಳಿಸುತ್ತದೆ. ಛಾಯಾಗ್ರಾಹಕರಿಗೆ ಇದು ಅತ್ಯುತ್ತಮ ತಾಣವಾಗಿದೆ. ಇದಕ್ಕೆ ಜೊತೆಯಾಗಿ, ಭೀಮನಗುಡ್ಡ ಧಾರ್ಮಿಕ ಭಾವನೆಯನ್ನೂ ಹೊತ್ತಿದೆ. ಸ್ಥಳೀಯರು ಇಲ್ಲಿ ಭೀಮನಿಗೆ ಸಂಬಂಧಿಸಿದ ಪವಿತ್ರತೆಯನ್ನು ನಂಬುತ್ತಾರೆ. ಕೆಲವರು ಈ ಪ್ರದೇಶದಲ್ಲಿ ಪೂಜೆ ಸಲ್ಲಿಸುವುದನ್ನೂ ಕಾಣಬಹುದು. ಹಬ್ಬ-ಜಾತ್ರೆಗಳ ಸಮಯದಲ್ಲಿ ಈ ಸ್ಥಳದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮದ ಬೆಳವಣಿಗೆಯಿಂದ ಭೀಮನಗುಡ್ಡ ಹೆಚ್ಚು ಗಮನ ಸೆಳೆಯುತ್ತಿದೆ. ಆದರೆ, ಈ ಪ್ರದೇಶದ ನೈಸರ್ಗಿಕ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಪ್ರವಾಸಿಗರು ಪರಿಸರ ಸಂರಕ್ಷಣೆಗೆ ಗಮನ ನೀಡಬೇಕು ಮತ್ತು ಕಸ ಹಾಕುವುದನ್ನು ತಪ್ಪಿಸಬೇಕು.
ಭೀಮನಗುಡ್ಡ ಪ್ರಕೃತಿ, ಪೌರಾಣಿಕತೆ ಮತ್ತು ಆಧ್ಯಾತ್ಮಿಕತೆಯ ಸುಂದರ ಸಂಯೋಜನೆಯಾಗಿದೆ. ಇದು ಕೇವಲ ಪ್ರವಾಸಿ ತಾಣವಲ್ಲ, ಆದರೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಒಂದು ಅಮೂಲ್ಯ ಸಂಪತ್ತಾಗಿದೆ.

ಲೇಖನ : ಸನ್ನಿಧಿ ನಿಲೇಕಣಿ
ಹಂಚಿಕೊಳ್ಳಿ ಭೀಮನಗುಡ್ಡ: ಪ್ರಕೃತಿಯ ಮಡಿಲಿನಂದು ಅದ್ಭುತ ತಾಣ… ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ.
ಸನ್ನಿಧಿ ವಿ.

ನಿಸರ್ಗ ಸನ್ನಿಧಿ ಸಂಪಾದಕೀಯ ತಂಡ

ಪ್ರಕೃತಿ, ಪರಿಸರ, ಸಂಸ್ಕೃತಿ ಮತ್ತು ಪರಂಪರೆಯ ಜ್ಞಾನವನ್ನು ಸರಳ ಮತ್ತು ಜವಾಬ್ದಾರಿಯುತ ಕನ್ನಡದಲ್ಲಿ ಓದುಗರಿಗೆ ತಲುಪಿಸುವ ಪ್ರಯತ್ನ.

ನಿಮ್ಮ ಪ್ರತಿಕ್ರಿಯೆ ಬರೆಯಿರಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ.

ಮುಂದೆ ಓದಿ

ಸಂಬಂಧಿತ ಲೇಖನಗಳು

ಅಂಬಾಗಿರಿಯ ಆಧ್ಯಾತ್ಮಿಕ ರಹಸ್ಯಗಳ ಅನಾವರಣ…
ದೇವಸ್ಥಾನಗಳು

ಅಂಬಾಗಿರಿಯ ಆಧ್ಯಾತ್ಮಿಕ ರಹಸ್ಯಗಳ ಅನಾವರಣ…

August 1, 20262 ನಿಮಿಷ ಓದು

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅಂಬಾಗಿರಿ ಪ್ರದೇಶದಲ್ಲಿ ನೆಲೆಗೊಂಡಿರುವ ಶ್ರೀ ರಾಮಕೃಷ್ಣ ಕಾಳಿಕಾ ಮಠವು ಸಹ್ಯಾದ್ರಿಯ ನೈಸರ್ಗಿಕ ಸೊಬಗು, ಶಕ್ತಿ ಆರಾಧನೆ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿರುವ ಅಪರೂಪದ…

ಪೂರ್ಣ ಲೇಖನ
ನಾಗದೋಷ ನಿವಾರಣೆಯ ಪ್ರಸಿದ್ಧ ಕ್ಷೇತ್ರ – ಮುಗ್ವಾ
ದೇವಸ್ಥಾನಗಳು

ನಾಗದೋಷ ನಿವಾರಣೆಯ ಪ್ರಸಿದ್ಧ ಕ್ಷೇತ್ರ – ಮುಗ್ವಾ

August 1, 20262 ನಿಮಿಷ ಓದು

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದಲ್ಲಿ ನೆಲೆಸಿರುವ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಕರಾವಳಿ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದೆ ಎಂದು…

ಪೂರ್ಣ ಲೇಖನ
ನೀರಿನೊಳಗಿನ ಶಿವಸನ್ನಿಧಿ- ಸಹಸ್ರಲಿಂಗ ಮಹಿಮೆ
ನಿಸರ್ಗ ಸಂರಕ್ಷಣೆ

ನೀರಿನೊಳಗಿನ ಶಿವಸನ್ನಿಧಿ- ಸಹಸ್ರಲಿಂಗ ಮಹಿಮೆ

July 25, 20262 ನಿಮಿಷ ಓದು

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಮೀಪದಲ್ಲಿರುವ ಸಹಸ್ರಲಿಂಗವು ಪ್ರಕೃತಿ, ಇತಿಹಾಸ ಮತ್ತು ಭಕ್ತಿಯ ಅನನ್ಯ ಸಂಗಮವಾಗಿರುವ ಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರವಾಗಿದೆ. ಶಾಂತ ಸ್ವಭಾವದ ಶಾಳ್ಮಲಾ ನದಿಯ ತೀರದಲ್ಲಿ…

ಪೂರ್ಣ ಲೇಖನ
ವಾಟ್ಸಾಪ್ ಗುಂಪಿಗೆ ಸೇರಿ
Translate »