ಶನಿವಾರ - 5 ಸೆಪ್ಟೆಂಬರ್ 2026
ಸಂಸ್ಕೃತಿ ಮತ್ತು ಪರಂಪರೆ

ನೆಲ್ಲಿಕಾಯಿ ಮಹಿಮೆ ಸಾರುವ ಏಕಾದಶಿ…

ಸಂಪಾದಕೀಯ ತಂಡ July 24, 20262 ನಿಮಿಷ ಓದು
ನೆಲ್ಲಿಕಾಯಿ ಮಹಿಮೆ ಸಾರುವ ಏಕಾದಶಿ…

ಭಾರತೀಯ ಸಂಸ್ಕೃತಿಯಲ್ಲಿ ವೃಕ್ಷಗಳಿಗೆ ದೇವತಾಸಮಾನ ಸ್ಥಾನವಿದೆ. ಆ ವೃಕ್ಷಗಳಲ್ಲಿ ಪ್ರಮುಖವಾದದ್ದು ನೆಲ್ಲಿಕಾಯಿ (ಆಮ್ಲಾ) ಮರ. ಫಾಲ್ಗುಣ ಮಾಸದ ಶುಕ್ಲಪಕ್ಷದ ಏಕಾದಶಿಯನ್ನು ಆಮ್ಲಕೀ ಏಕಾದಶಿ ಎಂದು ಆಚರಿಸಲಾಗುತ್ತದೆ. ಈ ದಿನ ವಿಷ್ಣುಭಕ್ತರು ವಿಶೇಷವಾಗಿ ನೆಲ್ಲಿಕಾಯಿ ಮರವನ್ನು ಪೂಜಿಸಿ ಉಪವಾಸ ವ್ರತವನ್ನು ಆಚರಿಸುತ್ತಾರೆ.
ಪುರಾಣಗಳಲ್ಲಿ ಹೇಳುವಂತೆ, ಆಮ್ಲಕೀ ಏಕಾದಶಿಯಂದು ನೆಲ್ಲಿಕಾಯಿ ಮರದಲ್ಲಿ ಶ್ರೀವಿಷ್ಣುವಿನ ವಾಸವಿದೆ ಎಂದು ನಂಬಲಾಗಿದೆ. ಆದ್ದರಿಂದ ಈ ದಿನ ಮರದ ಕೆಳಗೆ ಕಲಶ ಸ್ಥಾಪಿಸಿ, ಹೂವು-ಹಣ್ಣುಗಳಿಂದ ಅಲಂಕರಿಸಿ, ದೀಪಾರಾಧನೆ ಮಾಡಲಾಗುತ್ತದೆ. ಕೆಲವರು ಮರದ ಸುತ್ತ ಪ್ರದಕ್ಷಿಣೆ ಹಾಕಿ, ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾರೆ. ಈ ವ್ರತದಿಂದ ಪಾಪಗಳು ನಿವಾರಣೆಯಾಗುತ್ತವೆ ಮತ್ತು ಆರೋಗ್ಯ, ಐಶ್ವರ್ಯ ಲಭಿಸುತ್ತದೆ ಎಂಬ ನಂಬಿಕೆ ಇದೆ.
ನೆಲ್ಲಿಕಾಯಿ ಆರೋಗ್ಯದ ದೃಷ್ಟಿಯಿಂದಲೂ ಅತ್ಯಂತ ಮಹತ್ವzಗಿದೆ. ಆಯುರ್ವೇದದಲ್ಲಿ ಇದನ್ನು ರಸಾಯನ ಎಂದು ಕರೆಯಲಾಗುತ್ತದೆ. ವಿಟಮಿನ್-ಸಿ ಸಮೃದ್ಧವಾಗಿರುವ ಈ ಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೂದಲು, ಚರ್ಮ ಮತ್ತು ಜೀರ್ಣಕ್ರಿಯೆಗೆ ಸಹಕಾರಿ. ಹೀಗಾಗಿ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಮಹತ್ವ ಎರಡನ್ನೂ ಹೊಂದಿರುವ ಹಣ್ಣಾಗಿದೆ ನೆಲ್ಲಿಕಾಯಿ.
ಗ್ರಾಮೀಣ ಭಾಗಗಳಲ್ಲಿ ಈ ದಿನ ಕುಟುಂಬ ಸಮೇತವಾಗಿ ಮರದ ಕೆಳಗೆ ಪೂಜೆ ಮಾಡಿ, ಪ್ರಸಾದವಾಗಿ ನೆಲ್ಲಿಕಾಯಿ ಪಚಡಿ ಅಥವಾ ಚಟ್ನಿ ತಯಾರಿಸುತ್ತಾರೆ. ಕೆಲವು ಕಡೆಗಳಲ್ಲಿ ಭಜನೆ, ಹರಿಕಥೆ ಕಾರ್ಯಕ್ರಮಗಳೂ ನಡೆಯುತ್ತವೆ. ಮಕ್ಕಳಿಗೆ ವೃಕ್ಷ ಸಂರಕ್ಷಣೆ ಬಗ್ಗೆ ತಿಳಿಸುವುದಕ್ಕೂ ಈ ಹಬ್ಬ ಪ್ರೇರಣೆಯಾಗಿದೆ.
ಇಂದಿನ ಯುಗದಲ್ಲಿ ಪರಿಸರ ಸಂರಕ್ಷಣೆ ಅತ್ಯಗತ್ಯ. ಆಮ್ಲಕೀ ಏಕಾದಶಿ ನಮ್ಮಿಗೆ ವೃಕ್ಷಗಳ ಮಹತ್ವವನ್ನು ನೆನಪಿಸುತ್ತದೆ. ನೆಲ್ಲಿಕಾಯಿ ಮರವನ್ನು ನೆಡುವುದು, ಬೆಳೆಸುವುದು ಮತ್ತು ಕಾಪಾಡುವುದು ನಮ್ಮ ಕರ್ತವ್ಯವಾಗಬೇಕು. ಧಾರ್ಮಿಕ ಆಚರಣೆಗಳ ಮೂಲಕ ಪ್ರಕೃತಿಯ ಮೇಲಿನ ಪ್ರೀತಿ ಬೆಳೆಸುವ ಈ ಹಬ್ಬವು ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯವನ್ನು ತೋರಿಸುತ್ತದೆ. ಹೀಗಾಗಿ ನೆಲ್ಲಿಕಾಯಿ ಮತ್ತು ಆಮ್ಲಕೀ ಏಕಾದಶಿ ಕೇವಲ ವ್ರತವಲ್ಲ, ಆರೋಗ್ಯ, ಪರಿಸರ ಮತ್ತು ಭಕ್ತಿ ಒಂದಾಗುವ ಪವಿತ್ರ ಸಂಭ್ರಮವಾಗಿದೆ.

ಲೇಖನ : ಸನ್ನಿಧಿ ನಿಲೇಕಣಿ


ಹಂಚಿಕೊಳ್ಳಿ ನೆಲ್ಲಿಕಾಯಿ ಮಹಿಮೆ ಸಾರುವ ಏಕಾದಶಿ… ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ.
ಸನ್ನಿಧಿ ವಿ.

ನಿಸರ್ಗ ಸನ್ನಿಧಿ ಸಂಪಾದಕೀಯ ತಂಡ

ಪ್ರಕೃತಿ, ಪರಿಸರ, ಸಂಸ್ಕೃತಿ ಮತ್ತು ಪರಂಪರೆಯ ಜ್ಞಾನವನ್ನು ಸರಳ ಮತ್ತು ಜವಾಬ್ದಾರಿಯುತ ಕನ್ನಡದಲ್ಲಿ ಓದುಗರಿಗೆ ತಲುಪಿಸುವ ಪ್ರಯತ್ನ.

ನಿಮ್ಮ ಪ್ರತಿಕ್ರಿಯೆ ಬರೆಯಿರಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ.

ಮುಂದೆ ಓದಿ

ಸಂಬಂಧಿತ ಲೇಖನಗಳು

ನಾಗರ ಪಂಚಮಿ ಎಂದರೆ ಜೋಕಾಲಿಯ ನೆನಪು!
ಸಂಸ್ಕೃತಿ ಮತ್ತು ಪರಂಪರೆ

ನಾಗರ ಪಂಚಮಿ ಎಂದರೆ ಜೋಕಾಲಿಯ ನೆನಪು!

August 20, 20263 ನಿಮಿಷ ಓದು

ನಾಗರ ಪಂಚಮಿ ಎಂದರೆ ಕೇವಲ ನಾಗದೇವರ ಆರಾಧನೆಯ ಹಬ್ಬವಲ್ಲ; ಗ್ರಾಮೀಣ ಬದುಕಿನ ಸಂಭ್ರಮ, ಹೆಣ್ಣುಮಕ್ಕಳ ಬಾಲ್ಯದ ನೆನಪು, ಜೋಕಾಲಿಯ ಜೀಕಾಟ ಮತ್ತು ಅಕ್ಕ-ತಂಗಿಯರ ನಗುವಿನೊಂದಿಗೆ ಬೆಸೆದುಕೊಂಡಿರುವ ಅಪೂರ್ವ ಸಾಂಸ್ಕೃತಿಕ ಹಬ್ಬವೂ ಹೌದು. ಶ್ರಾವಣ…

ಪೂರ್ಣ ಲೇಖನ
ನಾಗಾರಾಧನೆಯ ಹಿಂದಿನ ನಿಗೂಢ ಕಥೆ!
ಸಂಸ್ಕೃತಿ ಮತ್ತು ಪರಂಪರೆ

ನಾಗಾರಾಧನೆಯ ಹಿಂದಿನ ನಿಗೂಢ ಕಥೆ!

August 20, 20267 ನಿಮಿಷ ಓದು

ಶ್ರಾವಣ ಮಾಸ ಬಂದರೆ ಸಾಕು, ಹಳ್ಳಿಗಳಿಂದ ಹಿಡಿದು ನಗರಗಳವರೆಗೆ ಹಬ್ಬದ ಸಂಭ್ರಮ ಮನೆ ಮಾಡುತ್ತದೆ. ಹಸಿರು ಹೊದ್ದಿರುವ ಭೂಮಿ, ಮಳೆಗಾಲದ ತಂಪು, ಮನೆಯಂಗಳದಲ್ಲಿ ರಂಗೋಲಿ, ಹೂವಿನ ಅಲಂಕಾರ, ನಾಗರ ಹುತ್ತದ ಮುಂದೆ ನಡೆಯುವ…

ಪೂರ್ಣ ಲೇಖನ
ನಿಸರ್ಗದೊಂದಿಗೆ ಬೆಸೆದ ನಾಗರ ಪಂಚಮಿ
ಸಂಸ್ಕೃತಿ ಮತ್ತು ಪರಂಪರೆ

ನಿಸರ್ಗದೊಂದಿಗೆ ಬೆಸೆದ ನಾಗರ ಪಂಚಮಿ

August 19, 20263 ನಿಮಿಷ ಓದು

ನಿಸರ್ಗದ ಸಮದುರ ಸಸ್ಯಶ್ಯಾಮಲ ಮಡಿಲಿನಲ್ಲಿ ಆನಂದದಿಂದ ನಲಿವ ಹಲವಾರು ಜೀವಜಂತು, ಪ್ರಾಣಿ, ಪಕ್ಷಿಗಳು ಈ ಭೂತಾಯಿಯ ಅತ್ಯಮೂಲ್ಯವಾದ ಮಕ್ಕಳಾಗಿದ್ದಾರೆ. ಈ ಒಂದು ಮಹಾಕುಟುಂಬದಲ್ಲಿ ಹಲವಾರು ವಿಷಕಾರಿ ಜಂತುಗಳಿವೆ.  ಎಲ್ಲರಿಗೂ ತುಂಬಾ ಪರಿಚಿತವಾಗಿರುವ ಜಂತು…

ಪೂರ್ಣ ಲೇಖನ
ವಾಟ್ಸಾಪ್ ಗುಂಪಿಗೆ ಸೇರಿ
Translate »