ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ನಾಲ್ಕನೇ ಭಾನುವಾರದಂದು ವಿಶ್ವ ನದಿಗಳ ದಿನವನ್ನು (World Rivers Day) ಆಚರಿಸಲಾಗುತ್ತದೆ. *ಪ್ರಮುಖ ಉದ್ದೇಶ:*
ನದಿಗಳ ಮಹತ್ವವನ್ನು ತಿಳಿಸುವುದು, ನದಿಗಳ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವುದು ಮತ್ತು ನದಿಗಳ ಸಂರಕ್ಷಣೆಗೆ ಒತ್ತು ನೀಡುವುದು.
*ದಿನಾಚರಣೆಯ ಪ್ರಾರಂಭ:*
ಇದನ್ನು 2005ರಲ್ಲಿ ಕೆನಡಾದ ನದಿ ಸಂರಕ್ಷಕರಾದ ಮಾರ್ಕ್ ಆಂಜೆಲೊ (Mark Angelo) ಅವರ ನೇತೃತ್ವದಲ್ಲಿ ಆರಂಭಿಸಲಾಯಿತು.
*ಆಚರಣೆ:*
ನೂರಕ್ಕೂ ಹೆಚ್ಚು ದೇಶಗಳಲ್ಲಿ ನದಿ ಸ್ವಚ್ಛತಾ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು ಹಾಗೂ ಜಾಗೃತಿ ಜಾಥಾಗಳನ್ನು ನಡೆಸಲಾಗುತ್ತದೆ.
ಮೇಲಿನ ಫೋಟೋ ತಿಂಗಳ ಹಿಂದಿನ ‘ಬೇಡ್ತಿ’ ನದಿಯ ಕರುಣಾಜನಕ ಸ್ಥಿತಿಯನ್ನು ತೋರಿಸುತ್ತದೆ. ನದಿ ಮೂಲಗಳು ಮತ್ತು ನದಿಗಳ ಸಂರಕ್ಷಣೆ ನಮ್ಮ ಪ್ರಥಮ ಆದ್ಯತೆ ಆಗಬೇಕಿದೆ.
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||
ಇದು ಸ್ನಾನ ಮಾಡುವಾಗ ಅಥವಾ ಪವಿತ್ರ ಜಲವನ್ನು ಸ್ಪರ್ಶಿಸುವಾಗ ಸ್ನಾನದ ಮಂತ್ರವಾಗಿ ಪಠಿಸುವ ಪ್ರಸಿದ್ಧ ಸಂಸ್ಕೃತ ಶ್ಲೋಕವಾಗಿದೆ.
