ಸೋಮವಾರ - 16 ನವೆಂಬರ್ 2026
ಔಷಧೀಯ ಸಸ್ಯಗಳು

ವಿಜಯದ ಸಂಕೇತದ ಬನ್ನಿ ಮರ ಆರೋಗ್ಯಕ್ಕೂ ಉಪಯುಕ್ತ

ಸಂಪಾದಕೀಯ ತಂಡ October 20, 20263 ನಿಮಿಷ ಓದು
ವಿಜಯದ ಸಂಕೇತದ ಬನ್ನಿ ಮರ ಆರೋಗ್ಯಕ್ಕೂ ಉಪಯುಕ್ತ

ವಿಜಯದಶಮಿಯು ಹಿಂದುಗಳಿಗೆ ಪವಿತ್ರ ಹಬ್ಬ.  ವಿಜಯದ ಸಂಕೆತವಾಗಿ ಇಂದಿಗೂ ಬನ್ನಿ ಮರವನ್ನು ಪೂಜಿಸುವುದು ಹಾಗೂ ಅದರ ಎಲೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದು ಕರ್ನಾಟಕದ ಹಲವು ಕಡೆಗಳಲ್ಲಿ ಆಚರಣೆಯಲ್ಲಿದೆ.. ಧಾರ್ಮಿಕ ಆಚರಣೆಯ  ಜೊತೆಗೆ ಪರಿಸರ ಸಂರಕ್ಷಣೆ, ಆಹಾರ ಮತ್ತು ಸಾಂಪ್ರದಾಯಿಕ ಔಷಧ ಪದ್ಧತಿಗಳಲ್ಲಿಯೂ ಬನ್ನಿ ಮರಕ್ಕೆ ವಿಶಿಷ್ಟ ಸ್ಥಾನವಿದೆ.

ಪುರಾಣದ ಹಿನ್ನೆಲೆ : ಪುರಾಣದ ಪ್ರಕಾರ ಪಾಂಡವರು ಅಜ್ಞಾತವಾಸಕ್ಕೆ ಹೋಗುವಾಗ ಬನ್ನಿ ಬರದಲ್ಲಿ ತಮ್ಮ ಶಸ್ತ್ರಗಳನ್ನು ಅಡಗಿಸಿ ಇಟ್ಟಿದ್ದೆರು. ಅಜ್ಞಾತವಾಸ ಪೂರ್ಣಗೊಂಡ ನಂತರ ಕೌರವರ ವಿರುದ್ಧ ಯುದ್ಧಕ್ಕೆ  ಹೊರಡುವಾಗ ಬನ್ನಿ ಮರವನ್ನು ಪೂಜಿಸಿ ಶಸ್ತ್ರಗಳನ್ನು ತೆಗೆದುಕೊಂಡರು.ಬನ್ನಿ ಮರವನ್ನು ಪೂಜಿಸಿದ್ದರಿಂದ ಪಾಂಡವರಿಗೆ ವಿಜಯ ಸಿಕ್ಕಿತು ಎಂದು ಹೇಳಲಾಗುತ್ತದೆ.  ಪಾಂಡವರಿಗೆ ವಿಜಯ ನೀಡಿದ ವೃಕ್ಷವೆಂದು  ಎಲ್ಲಾ ಕೆಲಸಗಳಲ್ಲಿಯೂ ವಿಜಯ ಸಿಗಲಿ ಎಂದು ವಿಜಯ ದಶಮಿಯನ್ನು ಬನ್ನಿ ಕೊಡುವ ಪದ್ಧತಿ ಆಚರಿಸಲಾಗುತ್ತದೆ.  

ಮೈಸೂರು ಅರಮನೆಯಲ್ಲಿ  ದಸರಾ ಹಬ್ಬವೂ ಬಹಳ ವಿಶೇಷ. ದಸರಾ ಹಬ್ಬದ ಕೊನೆಯ ದಿನವಾದ ವಿಜಯದಶಮಿಯಂದು ಜಂಬೂ ಸವಾರಿ ಮುಗಿದ ನಂತರ ಬನ್ನಿ ಮರದ ಪೂಜೆ ಮಾಡುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯ. ಇದನ್ನು ‘ಬನ್ನಿ ಮಂಟಪ’ ಪೂಜೆ ಎಂದು ಕರೆಯುತ್ತರೆ. 

ವೈಜ್ಞಾನಿಕ ಹೆಸರು ಮತ್ತು ವೈಶಿಷ್ಟ್ಯಗಳು: ಕರ್ನಾಟಕದಲ್ಲಿ ಬನ್ನಿ ಮರದ  ವೈಜ್ಞಾನಿಕ ಹೆಸರು ‘prospopis cineraria(ಪ್ರೊಸ್ಪೋಫೀಸ್ ಸಿನಿರಾರಿಯಾ). ಇದು ‘fabaceae(ಫ್ಯಾಬೇಸಿ) ಕುಟುಂಬಕ್ಕೆ ಸೇರಿದೆ. ಕರ್ನಾಟಕದ ಕೆಲವು ಸಸ್ಯಸಂಪನ್ಮೂಲ ದಾಖಲೆಗಳಲ್ಲಿ ಬನ್ನಿ ಮರವನ್ನು Acacia ferruginea ಎಂದು ಗುರುತಿಸಲಾಗಿದೆ; ಈ ಪ್ರಭೇದದ ಪ್ರಸ್ತುತ ವೈಜ್ಞಾನಿಕ ಹೆಸರು Senegalia ferruginea . ಇದನ್ನು ಹಿಂದಿಯಲ್ಲಿ ಖೇಜ್ರಾ, ಒರಿಯಾ ದಲ್ಲಿ ಶಮಿ, ತೆಲುಗು ಭಾಷೆಯಲ್ಲಿ ಜಮ್ಮಿ ಚೆಟ್ಟು ಎಂದು ಕರೆಯುತ್ತಾರೆ.. ಬನ್ನಿ ಮರವು ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಷ್ಟ್ರೀಯ ಮರ. ಭರತದಲ್ಲಿ ರಾಜಸ್ಥಾನ ಹಾಗೂ ತೆಲಂಗಾಣದ ರಾಜ್ಯದ   ಮರ ಬನ್ನಿ ಮರ. 

ಇದು ಒಂದು ಚಿಕ್ಕ ಮರ. ಕೇವಲ 3 ರಿಂದ 5 ಮೀಟರ್ ಎತ್ತರಕ್ಕೆ ಬಿಡುತ್ತದೆ. ಇದರ ಕೊಂಬೆಗಳಲ್ಲಿ ಮುಳ್ಳು ಮುಳ್ಳುಗಳಿರುತ್ತವೆ. ಬನ್ನಿ ಮರ ಬರಗಾಲದಲ್ಲಿಯೂ ಬೆಳೆಯುತ್ತದೆ. ಇದು ಮರುಭೂಮಿಯಲ್ಲಿಯೂ ಬೆಳೆಯುತ್ತದೆ ಏಕೆಂದರೆ ಬನ್ನಿ ಮರಕ್ಕೆ ಜೀವಿಸಲು ವರ್ಷಕ್ಕೆ ಕೇವಲ 15 ಸೆಂ.ಮೀ ಮಳೆ ಸಾಕು.  ಇದರ ಬೇರುಗಳು 30-40 ಮೀಟರ್ ಆಳಕ್ಕೆ ಹೋಗಿ ಅಂತರ್ಜಲವನ್ನು ಹಿಡಿದಿಟ್ಟುಕೊಳ್ಳುವ ಗುಣ ಹೊಂದಿವೆ. UAE ಸರ್ಕಾರ ‘Give a Ghaf’ ಅಭಿಯಾನ ಶುರು ಮಾಡಿದೆ. 

ಮರಗಳ ರಕ್ಷಣೆಗೆ ನಡೆದ ಐತಿಹಾಸಿಕ ತ್ಯಾಗ:  ರಾಜಸ್ಥಾನದ ಖೇಜರ್ಲಿ ಗ್ರಾಮದಲ್ಲಿ 1730ರಲ್ಲಿ ನಡೆದ ಬನ್ನಿ ಮರ ಸಂರಕ್ಷಣೆಗಾಗಿ  ನಡೆದ ಹೋರಾಟವೂ ಐತಿಹಾಸಿಕ ದಾಖಲೆಯಾಗಿದೆ. ಅಮೃತಾ ದೇವಿ ಬಿಷ್ಣೋಯಿ ಅವರ ನೇತೃತ್ವದಲ್ಲಿ 363 ಬಿಷ್ಣೋಯಿ ಸಮುದಾಯದವರು ಖೇಜ್ರಿ ಮರಗಳನ್ನು ಕಡಿಯುವುದನ್ನು ತಡೆಯಲು ಪ್ರಾಣತ್ಯಾಗ ಮಾಡಿದರು. ಮರಗಳನ್ನು ರಕ್ಷಿಸುವುದಕ್ಕಾಗಿ  ಅವರೆಲ್ಲರ ಪ್ರಾಣ  ತ್ಯಾಗವು ಇಂದಿಗೂ ಪರಿಸರ ಪ್ರೇಮಿಗಳಿಗೆ ಪ್ರೇರಣೆಯಾಗಿದೆ. 

ಆರೋಗ್ಯ ಮತ್ತು ಔಷಧೀಯ ಬಳಕೆ: ಭಾರತದ ಕೆಲವು ಔಷಧಿಗಳಲ್ಲಿ ಹಳ್ಳಿ ಔಷಧಿಗಳ್ಲಲ್ಲಿ   ಬನ್ನಿ ಬನ್ನಿ ಮರದ ಎಲೆ ಮತ್ತು ತೊಗಟನ್ನು ಬಳಸಲಾಗುತ್ತದೆ. ಬನ್ನಿ ಮರದ ತೊಗಟೆಯಲ್ಲಿ ನೈಸರ್ಗಿಕವಾಗಿ  ಒಗರು ಗುಣ ಇರುತ್ತದೆ. ಇದರ ಎಲೆಗಳು ಆಂಟಿ-ಬ್ಯಾಕ್ಟೀರಿಯಲ್ ಮತ್ತು ಆಂಟಿ-ಇನ್ಫ್ಲಮೇಟರಿ ಗುಣವನ್ನು ಹೊಂದಿವೆ, ಇದರಿಂದ  ಚರ್ಮದ ತುರಿಕೆ, ಕಜ್ಜಿಯಂತಹ ರೋಗಗಳು ನಿವಾರಣೆಯಾಗಿತ್ತವೆ. ತೊಗಟಿನ ಖಷಾಯದಿಂದ ಬಾಯಿ ಹುಣ್ಣು (Mouth ulcers) ಮತ್ತು ಗಂಟಲು ನೊವು ನಿವಾರಣೆಯಾಗಿತ್ತವೆ ಜೊತೆಗೆ ಅತಿಯಾದ ಬೆದಿ ಮತ್ತು ಕರುಳಿನ ಜಂತುಹುಳುಗಳ ಸಮಸ್ಯೆಗೆ ರಾಮಬಾಣವಾಗಿದೆ.  ತೊಗಟೆಯ ಪುಡಿಯು ಸೌಂದರ್ಯ ವರ್ಧಕವಾಗಿಯೂ ಉಪಯುಕ್ತ. ತೊಗಟೆಯ ಪುಡಿಯನ್ನು ಅರಿಶಿನ ಮತ್ತು ಹಾಲಿನೊಂದಿಗೆ ಬೆರೆಸಿ ಹಚ್ಚುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.  

ಆಹಾರ ಮತ್ತು ಗ್ರಾಮೀಣ ಬದುಕಿನಲ್ಲಿ ಬನ್ನಿ ಮರ: ರಾಜಸ್ಥಾನದಲ್ಲಿ Prosopis cineraria ಮರದ ಹಸಿರು ಕಾಯಿಗಳನ್ನು ಆಹಾರವಾಗಿ ಬಳಸುತ್ತಾರೆ. ಅವುಗಳನ್ನು ‘ಸಾಂಗ್ರಿ’ ಎಂದು ಕರೆಯುತ್ತಾರೆ. ಅದರಿಂದ ಸಬ್ಜಿ, ಉಪ್ಪಿನಕಾಯಿ ಮಾಡುತ್ತಾರೆ. ಇದು ತುಂಬಾ ದುಬಾರಿ ಮತ್ತು ಪೌಷ್ಟಿಕ ಆಹಾರ. ಮರುಭೂಮಿ ಪ್ರದೇಶಗಳಲ್ಲಿ ಈ ಮರದ ಕಾಯಿಗಳನ್ನು ಆಹಾರವಾಗಿ ಬಳಸಲಾಗುತ್ತದೆ. ಇದರ ಎಲೆಗಳು ಮತ್ತು ಇತರ ಭಾಗಗಳು ಕೆಲವು ಪ್ರದೇಶಗಳಲ್ಲಿ ಪಶುಗಳ ಆಹಾರಕ್ಕೂ ಬಳಕೆಯಾಗುತ್ತವೆ.

ಬನ್ನಿ ಮರದ ಪರಿಸರ ಮಹತ್ವವೂ ಅಪಾರವಾಗಿದೆ. ಒಣ ಪ್ರದೇಶಗಳಲ್ಲಿ ಮಣ್ಣಿನ ಸವಕಳಿಯನ್ನು ತಗ್ಗಿಸಲು, ಜೀವಿಗಳಿಗೆ ಆಶ್ರಯ ಒದಗಿಸಲು ಮತ್ತು ಕೃಷಿ ಪರಿಸರ ವ್ಯವಸ್ಥೆಗೆ ನೆರವಾಗಲು ಇಂತಹ ಮರಗಳು ಸಹಕಾರಿ. ಆದ್ದರಿಂದ ಬನ್ನಿ ಮರವನ್ನು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತಗೊಳಿಸದೆ, ಅದರ ಸಂರಕ್ಷಣೆಗೂ ಆದ್ಯತೆ ನೀಡಬೇಕು.

ಸಂಪ್ರದಾಯದೊಂದಿಗೆ ಪರಿಸರ ಸಂರಕ್ಷಣೆಯ ಸಂದೇಶ: ಬನ್ನಿ ಮರವು ನಮ್ಮ ಧಾರ್ಮಿಕ ನಂಬಿಕೆ, ಸಾಂಸ್ಕೃತಿಕ ಪರಂಪರೆ, ಆಹಾರ ಪದ್ಧತಿ ಮತ್ತು ಪರಿಸರದ ನಡುವಿನ ಸಂಬಂಧವನ್ನು ನೆನಪಿಸುತ್ತದೆ. ವಿಜಯದಶಮಿಯಂದು ಬನ್ನಿ ಎಲೆಗಳನ್ನು ವಿನಿಮಯ ಮಾಡಿಕೊಳ್ಳುವಾಗ ಅದರ ಹಿಂದಿರುವ ವಿಜಯದ ಸಂದೇಶದ ಜೊತೆಗೆ ಪ್ರಕೃತಿಯನ್ನು ಕಾಪಾಡುವ ಸಂಕಲ್ಪವನ್ನೂ ಮಾಡೋಣ. ಸ್ಥಳೀಯ ಮರಗಳನ್ನು ಗುರುತಿಸಿ ಬೆಳೆಸುವುದು, ಅವುಗಳನ್ನು ಅನಗತ್ಯವಾಗಿ ಕಡಿಯದಿರುವುದು ಮತ್ತು ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಉಳಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಬನ್ನಿ ಮರ ಕೇವಲ ಮರವಲ್ಲ, ಅದು ವಿಜಯದ ಸಂಕೇತ, ತ್ಯಾಗದ ಪ್ರತೀಕ ಮತ್ತು ಬರಡು ಭೂಮಿಯ ಜೀವನಾಡಿ.

ಅಪೂರ್ವಾ ಹೆಗಡೆ, ಮಾವಿನಕೋಡು

ಹಂಚಿಕೊಳ್ಳಿ ವಿಜಯದ ಸಂಕೇತದ ಬನ್ನಿ ಮರ ಆರೋಗ್ಯಕ್ಕೂ ಉಪಯುಕ್ತ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ.
ಸನ್ನಿಧಿ ವಿ.

ನಿಸರ್ಗ ಸನ್ನಿಧಿ ಸಂಪಾದಕೀಯ ತಂಡ

ಪ್ರಕೃತಿ, ಪರಿಸರ, ಸಂಸ್ಕೃತಿ ಮತ್ತು ಪರಂಪರೆಯ ಜ್ಞಾನವನ್ನು ಸರಳ ಮತ್ತು ಜವಾಬ್ದಾರಿಯುತ ಕನ್ನಡದಲ್ಲಿ ಓದುಗರಿಗೆ ತಲುಪಿಸುವ ಪ್ರಯತ್ನ.

ನಿಮ್ಮ ಪ್ರತಿಕ್ರಿಯೆ ಬರೆಯಿರಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ.

ಮುಂದೆ ಓದಿ

ಸಂಬಂಧಿತ ಲೇಖನಗಳು

ಇಂದು ವಿಶ್ವ ಆಯುರ್ವೇದ ದಿನ: “ನಮ್ಮ ತೋಟವೇ ನಮ್ಮ ಆರೋಗ್ಯದ ಮೊದಲ ಔಷಧಾಲಯ” 
ಔಷಧೀಯ ಸಸ್ಯಗಳು

ಇಂದು ವಿಶ್ವ ಆಯುರ್ವೇದ ದಿನ: “ನಮ್ಮ ತೋಟವೇ ನಮ್ಮ ಆರೋಗ್ಯದ ಮೊದಲ ಔಷಧಾಲಯ” 

October 11, 20262 ನಿಮಿಷ ಓದು

ಆಯುರ್ವೇದ ಎಂದರೆ ಕೇವಲ ರೋಗ ಬಂದಾಗ ತೆಗೆದುಕೊಳ್ಳುವ ಔಷಧವಲ್ಲ. ಅದು ಆರೋಗ್ಯವನ್ನು ಕಾಪಾಡಿಕೊಳ್ಳುವ ಜೀವನಪದ್ಧತಿ, ಆಹಾರ ಪದ್ಧತಿ ಮತ್ತು ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕುವ ಜ್ಞಾನ. ವಿಶ್ವ ಆಯುರ್ವೇದ ದಿನವನ್ನು ಆಚರಿಸುವ ಈ ಸಂದರ್ಭದಲ್ಲಿ…

ಪೂರ್ಣ ಲೇಖನ →
ಆಯುರ್ವೇದದತ್ತ ವಿಶ್ವದ ನೋಟ
ಔಷಧೀಯ ಸಸ್ಯಗಳು

ಆಯುರ್ವೇದದತ್ತ ವಿಶ್ವದ ನೋಟ

September 23, 20263 ನಿಮಿಷ ಓದು

“ಆರೋಗ್ಯವೇ ಮಹಾಭಾಗ್ಯ” ಎಂಬ ಮಾತು ಭಾರತೀಯ ಜೀವನ ಪದ್ಧತಿಯಲ್ಲಿ ಬಹಳ ಹಿಂದಿನಿಂದಲೂ ಮಹತ್ವ ಪಡೆದಿದೆ. ದೇಹ, ಮನಸ್ಸು ಹಾಗೂ ಪರಿಸರದ ನಡುವೆ ಸಮತೋಲನ ಕಾಪಾಡಿಕೊಂಡು ಆರೋಗ್ಯಕರ ಜೀವನ ನಡೆಸುವ ಮಾರ್ಗವನ್ನು ತೋರಿಸಿದ ಪ್ರಾಚೀನ…

ಪೂರ್ಣ ಲೇಖನ →
ಹಸಿರಿನ ಸಾಮ್ರಾಜ್ಯ ಅಮೆಜಾನ್
ಔಷಧೀಯ ಸಸ್ಯಗಳು

ಹಸಿರಿನ ಸಾಮ್ರಾಜ್ಯ ಅಮೆಜಾನ್

September 7, 20263 ನಿಮಿಷ ಓದು

“ಒಂದು ಕಾಡು ನಾಶವಾದಾಗ ಕೇವಲ ಮರಗಳು ಬೀಳುವುದಿಲ್ಲ; ಅದರೊಂದಿಗೆ ಅನೇಕ ಜೀವಿಗಳ ಮನೆ, ಪ್ರಕೃತಿಯ ಸಮತೋಲನ ಮತ್ತು ಭವಿಷ್ಯದ ಭರವಸೆಯೂ ಕುಸಿಯುತ್ತದೆ.” ಪ್ರಕೃತಿಯ ಹಸಿರು ಹೊದಿಕೆಯಂತೆ ಹರಡಿಕೊಂಡಿರುವ ಅಮೆಜಾನ್ ಮಳೆಕಾಡು ಭೂಮಿಯ ಅತ್ಯಂತ…

ಪೂರ್ಣ ಲೇಖನ →
ವಾಟ್ಸಾಪ್ ಗುಂಪಿಗೆ ಸೇರಿ
Translate »