ಗುರುವಾರ - 19 ನವೆಂಬರ್ 2026
ಸಂಸ್ಕೃತಿ ಮತ್ತು ಪರಂಪರೆ

ಅಕ್ಷಯ ತೃತೀಯ: ಅಕ್ಷಯ ಪುಣ್ಯದ ಪವಿತ್ರ ಹಬ್ಬ…

ಸಂಪಾದಕೀಯ ತಂಡ July 25, 20262 ನಿಮಿಷ ಓದು
ಅಕ್ಷಯ ತೃತೀಯ: ಅಕ್ಷಯ ಪುಣ್ಯದ ಪವಿತ್ರ ಹಬ್ಬ…

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಜೀವನದ ಅವಿಭಾಜ್ಯ ಅಂಗಗಳಾಗಿವೆ. ಅವು ಕೇವಲ ಸಂಭ್ರಮಾಚರಣೆಗಳಲ್ಲ, ನಮ್ಮ ಸಂಪ್ರದಾಯ, ಧಾರ್ಮಿಕ ನಂಬಿಕೆ ಮತ್ತು ಮಲ್ಯಗಳನ್ನು ಪ್ರತಿಬಿಂಬಿಸುವ ಪವಿತ್ರ ಕ್ಷಣಗಳಾಗಿವೆ. ಅಂತಹ ಮಹತ್ವಪೂರ್ಣ ಹಬ್ಬಗಳಲ್ಲಿ ಒಂದಾದ ಅಕ್ಷಯ ತೃತೀಯ ವಿಶೇಷ ಸ್ಥಾನವನ್ನು ಹೊಂದಿದೆ. ಅಕ್ಷಯ ಎಂದರೆ ಎಂದಿಗೂ ಕಡಿಮೆಯಾಗದ, ನಾಶವಾಗದ ಎಂಬ ಅರ್ಥ. ಈ ದಿನದಲ್ಲಿ ಮಾಡಿದ ಸತ್ಕಾರ್ಯಗಳು, ದಾನಧರ್ಮಗಳು ಮತ್ತು ಪುಣ್ಯಕರ್ಮಗಳು ಅನಂತ ಫಲವನ್ನು ನೀಡುತ್ತವೆ ಎಂಬ ನಂಬಿಕೆ ಇದೆ.
ಅಕ್ಷಯ ತೃತೀಯವು ಹಿಂದು ಪಂಚಾಂಗದ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಲ್ಲಿ ಆಚರಿಸ ಲಾಗುತ್ತದೆ. ಈ ದಿನವು ಯಾವುದೇ ಶುಭಕಾರ್ಯವನ್ನು ಆರಂಭಿಸಲು ಅತ್ಯಂತ ಶುಭಕರವೆಂದು ಪರಿಗಣಿಸ ಲಾಗುತ್ತದೆ. ವಿಶೇಷ ಮುಹೂರ್ತದ ಅಗತ್ಯವಿಲ್ಲದೆ ಮನೆ ಕಟ್ಟುವ ಕಾರ್ಯ, ವ್ಯಾಪಾರ ಆರಂಭ, ಹೂಡಿಕೆ, ವಿವಾಹ ನಿಶ್ಚಯ ಮುಂತಾ ದವುಗಳನ್ನು ಈ ದಿನದಲ್ಲಿ ಪ್ರಾರಂಭಿಸುವುದು ಮಂಗಳಕರವೆಂದು ನಂಬಲಾಗಿದೆ.
ಪುರಾಣಗಳ ಪ್ರಕಾರ, ಈ ದಿನಕ್ಕೆ ಅನೇಕ ಪೌರಾಣಿಕ ಮಹತ್ವಗಳಿವೆ. ಮಹಾಭಾರತದ ರಚನೆಯನ್ನು ಮಹರ್ಷಿ ವೇದ ವ್ಯಾಸ ಅವರು ಗಣೇಶನಿಂದ ಬರೆಯಿಸಿಕೊಂಡ ದಿನವೆಂದು ಹೇಳಲಾಗುತ್ತದೆ. ಹಾಗೆಯೇ, ವಿಷ್ಣುವಿನ ಆರನೆಯ ಅವತಾರವಾದ ಪರಶುರಾಮ ಈ ದಿನವೇ ಜನಿಸಿದರೆಂದು ಭಕ್ತರು ನಂಬುತ್ತಾರೆ. ಇದರಿಂದ ಈ ದಿನದ ಪಾವಿತ್ರ್ಯ ಮತ್ತಷ್ಟು ಹೆಚ್ಚುತ್ತದೆ.
ಅಕ್ಷಯ ತೃತೀಯದಂದು ದಾನ ಮಾಡುವುದಕ್ಕೆ ಅತ್ಯಂತ ಮಹತ್ವವಿದೆ. ಅನ್ನದಾನ, ವಸ್ತ್ರದಾನ, ಧನದಾನ ಇವುಗಳನ್ನು ಈ ದಿನದಲ್ಲಿ ಮಾಡಿದರೆ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಇದೆ. ವಿಶೇಷವಾಗಿ ಬಡವರಿಗೆ ಅನ್ನದಾನ ಮಾಡುವುದು ಅತ್ಯಂತ ಪವಿತ್ರ ಕಾರ್ಯವೆಂದು ಪರಿಗಣಿಸಲಾಗುತ್ತದೆ. ಈ ದಿನ ಮಾಡಿದ ದಾನ ಅಕ್ಷಯವಾಗಿರುತ್ತದೆ ಎಂಬ ಮಾತು ಜನಮಾನಸದಲ್ಲಿ ಬಹಳ ಪ್ರಸಿದ್ಧವಾಗಿದೆ.
ಇನ್ನೊಂದು ಪ್ರಮುಖ ಆಚರಣೆ ಎಂದರೆ ಚಿನ್ನ ಖರೀದಿ. ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಮನೆಗೆ ಧನಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ದಿನದಲ್ಲಿ ಜುವೆಲ್ಲರಿ ಅಂಗಡಿಗಳು ತುಂಬಾ ಜನರಿಂದ ಕಂಗೊಳಿಸುತ್ತವೆ. ಆದರೆ ಈ ಹಬ್ಬದ ನಿಜವಾದ ಅರ್ಥ ಕೇವಲ ಚಿನ್ನ ಖರೀದಿಸುವುದಲ್ಲ; ಅದು ಧರ್ಮ, ದಯೆ ಮತ್ತು ಸತ್ಸಂಸ್ಕಾರಗಳನ್ನು ಬೆಳೆಯಿಸುವುದಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಈ ಹಬ್ಬವನ್ನು ಸರಳವಾಗಿ ಆದರೆ ಭಕ್ತಿ ಭಾವದಿಂದ ಆಚರಿಸಲಾಗುತ್ತದೆ. ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ದೇವರಿಗೆ ಹಣ್ಣು, ಹೂವು, ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ.
ಮನೆಗಳಲ್ಲಿ ಸಿಹಿ ತಿಂಡಿಗಳನ್ನು ತಯಾರಿಸಿ ಕುಟುಂಬದ ವರೊಂದಿಗೆ ಹಂಚಿಕೊಳ್ಳುತ್ತಾರೆ. ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಲು ಈ ದಿನವನ್ನು ಶುಭವೆಂದು ಪರಿಗಣಿಸುತ್ತಾರೆ.
ಆಧುನಿಕ ಯುಗದಲ್ಲಿ ಅಕ್ಷಯ ತೃತೀಯದ ಆಚರಣೆಗಳಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತಿವೆ. ಚಿನ್ನ ಖರೀದಿಯ ಜೊತೆಗೆ ಜನರು ಆನ್‌ಲೈನ್ ಹೂಡಿಕೆ, ಹೊಸ ವ್ಯವಹಾರ ಆರಂಭಿಸುವುದಕ್ಕೂ ಈ ದಿನವನ್ನು ಆಯ್ಕೆ ಮಾಡುತ್ತಿದ್ದಾರೆ. ಆದರೆ ಈ ಹಬ್ಬದ ಮೂಲ ಸಂದೇಶ ಧರ್ಮ, ದಾನ ಮತ್ತು ನಿಷ್ಠೆ ಅದೇ ಉಳಿದಿದೆ.
ಒಟ್ಟಿನಲ್ಲಿ, ಅಕ್ಷಯ ತೃತೀಯವು ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ತರಲು ಪ್ರೇರೇಪಿಸುವ ಹಬ್ಬವಾಗಿದೆ. ಇದು ನಮ್ಮಲ್ಲಿ ದಯೆ, ಸಹಾನುಭೂತಿ ಮತ್ತು ಸೇವಾಭಾವವನ್ನು ಬೆಳೆಸುತ್ತದೆ. ಭೌತಿಕ ಸಂಪತ್ತಿಗಿಂತಲೂ ಆತ್ಮಿಕ ಸಂಪತ್ತೇ ಮುಖ್ಯವೆಂಬುದನ್ನು ಈ ಹಬ್ಬ ನಮಗೆ ತಿಳಿಸುತ್ತದೆ.
ಸಾರಾಂಶವಾಗಿ, ಅಕ್ಷಯ ತೃತೀಯವು ಕೇವಲ ಒಂದು ಹಬ್ಬವಲ್ಲ ಅದು ಸತ್ಪ್ರವೃತ್ತಿಗಳನ್ನು ಉತ್ತೇಜಿಸುವ, ಜೀವನದ ಸಕಾರಾತ್ಮಕ ಮಲ್ಯಗಳನ್ನು ಉಳಿಸಿಕೊಳ್ಳುವ ಪವಿತ್ರ ದಿನವಾಗಿದೆ. ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರೆ ನಿಜವಾದ ಅಕ್ಷಯ ಪುಣ್ಯವನ್ನು ಪಡೆಯಬಹುದು.

ಲೇಖನ : ಸನ್ನಿಧಿ ನಿಲೇಕಣಿ


ಹಂಚಿಕೊಳ್ಳಿ ಅಕ್ಷಯ ತೃತೀಯ: ಅಕ್ಷಯ ಪುಣ್ಯದ ಪವಿತ್ರ ಹಬ್ಬ… ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ.
ಸನ್ನಿಧಿ ವಿ.

ನಿಸರ್ಗ ಸನ್ನಿಧಿ ಸಂಪಾದಕೀಯ ತಂಡ

ಪ್ರಕೃತಿ, ಪರಿಸರ, ಸಂಸ್ಕೃತಿ ಮತ್ತು ಪರಂಪರೆಯ ಜ್ಞಾನವನ್ನು ಸರಳ ಮತ್ತು ಜವಾಬ್ದಾರಿಯುತ ಕನ್ನಡದಲ್ಲಿ ಓದುಗರಿಗೆ ತಲುಪಿಸುವ ಪ್ರಯತ್ನ.

ನಿಮ್ಮ ಪ್ರತಿಕ್ರಿಯೆ ಬರೆಯಿರಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ.

ಮುಂದೆ ಓದಿ

ಸಂಬಂಧಿತ ಲೇಖನಗಳು

ಹಣತೆಯ ಬೆಳಕಲ್ಲಿ ಮಣ್ಣಿನ ಮಹಿಮೆ
ಸಂಸ್ಕೃತಿ ಮತ್ತು ಪರಂಪರೆ

ಹಣತೆಯ ಬೆಳಕಲ್ಲಿ ಮಣ್ಣಿನ ಮಹಿಮೆ

November 9, 20267 ನಿಮಿಷ ಓದು

*ಬೆಳಕು ಎಂದರೆ ಕೇವಲ ಕತ್ತಲೆಯನ್ನು ದೂರಮಾಡುವ ಸಾಧನವಲ್ಲ; ಅದು ಜ್ಞಾನ, ಭಕ್ತಿ, ಭರವಸೆ ಮತ್ತು ಹೊಸ ಬದುಕಿನ ಸಂಕೇತ. ಅಂತಹ ಬೆಳಕನ್ನು ನೀಡುವ ಮಣ್ಣಿನ ಪುಟ್ಟ ಹಣತೆಯಲ್ಲಿ ನಮ್ಮ ಪೂರ್ವಜರ ಪರಂಪರೆ, ಪ್ರಕೃತಿಯ…

ಪೂರ್ಣ ಲೇಖನ →
ಅಯೋಧ್ಯೆಯ ಬೆಳಕಿನಲ್ಲಿ ರಾಮನ ಆಗಮನ
ಸಂಸ್ಕೃತಿ ಮತ್ತು ಪರಂಪರೆ

ಅಯೋಧ್ಯೆಯ ಬೆಳಕಿನಲ್ಲಿ ರಾಮನ ಆಗಮನ

November 9, 20264 ನಿಮಿಷ ಓದು

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಸಂಭ್ರಮ, ಸಿಹಿತಿಂಡಿ, ಹೊಸ ಬಟ್ಟೆ ಹಾಗೂ ಅಲಂಕಾರಗಳಿಗೆ ಸೀಮಿತವಾಗಿಲ್ಲ. ಪ್ರತಿಯೊಂದು ಹಬ್ಬದ ಹಿಂದೆ ಒಂದು ಪೌರಾಣಿಕ ಕಥೆ, ಐತಿಹಾಸಿಕ ಹಿನ್ನೆಲೆ, ಆಧ್ಯಾತ್ಮಿಕ ಸಂದೇಶ, ಪ್ರಕೃತಿಯೊಂದಿಗಿನ ಸಂಬಂಧ ಮತ್ತು…

ಪೂರ್ಣ ಲೇಖನ →
ಬಲಿಚಕ್ರವರ್ತಿಯ ಸ್ವಾಗತಕ್ಕೆ ಸಜ್ಜಾಗುವ ತುಳುನಾಡು!
ಸಂಸ್ಕೃತಿ ಮತ್ತು ಪರಂಪರೆ

ಬಲಿಚಕ್ರವರ್ತಿಯ ಸ್ವಾಗತಕ್ಕೆ ಸಜ್ಜಾಗುವ ತುಳುನಾಡು!

November 9, 20264 ನಿಮಿಷ ಓದು

ದೀಪಾವಳಿ ಎಂದರೆ ಕೇವಲ ಕತ್ತಲೆಯನ್ನು ದೂರಮಾಡುವ ದೀಪಗಳ ಹಬ್ಬವಲ್ಲ; ಅದು ನಮ್ಮ ಸಂಸ್ಕೃತಿಯ ನೆನಪುಗಳನ್ನು ಬೆಳಗಿಸುವ, ತಲೆಮಾರುಗಳ ನಡುವಿನ ಬಾಂಧವ್ಯವನ್ನು ಬೆಸೆಯುವ, ಪ್ರಕೃತಿಯೊಂದಿಗೆ ಮಾನವನ ಸಂಬಂಧವನ್ನು ನೆನಪಿಸುವ ಬೆಳಕಿನ ಹಬ್ಬ. ಭಾರತದ ಪ್ರತಿಯೊಂದು…

ಪೂರ್ಣ ಲೇಖನ →
ವಾಟ್ಸಾಪ್ ಗುಂಪಿಗೆ ಸೇರಿ
Translate »