ಉತ್ತರ ಕನ್ನಡ ಜಿಲ್ಲೆಯ ಸಿರಸಿ ತಾಲೂಕಿನ ಸಮೀಪದಲ್ಲಿರುವ ಮಂಜುಗುಣಿ ದೇವಾಲಯವು ಭಕ್ತರ ನಂಬಿಕೆಯ ಪ್ರತೀಕವಾಗಿ ಪ್ರಸಿದ್ಧಿಯಾಗಿದೆ. ದಟ್ಟ ಅರಣ್ಯ ಪ್ರದೇಶದ ಮಧ್ಯದಲ್ಲಿ ನೆಲೆಗೊಂಡಿರುವ ಈ ದೇವಾಲಯವು ಶ್ರೀ ವೆಂಕಟರಮಣ ಸ್ವಾಮಿಗೆ ಸಮರ್ಪಿತವಾಗಿದೆ. ಶಾಂತ ವಾತಾವರಣ, ಹಸಿರಿನ ಅಲೆಗಳು ಮತ್ತು ಪ್ರಕೃತಿಯ ಸೌಂದರ್ಯದಿಂದ ಕೂಡಿದ ಈ ಪ್ರದೇಶವು ಭಕ್ತರ ಮನಸ್ಸಿಗೆ ಆತ್ಮಶಾಂತಿ ನೀಡುತ್ತದೆ.
ಮಂಜುಗುಣಿ ದೇವಾಲಯದ ಇತಿಹಾಸವು ಹಲವು ಶತಮಾನಗಳ ಹಿಂದಿನದು ಎಂದು ಹೇಳಲಾಗು ತ್ತದೆ. ಸ್ಥಳೀಯ ಪೌರಾಣಿಕ ಕಥೆಗಳ ಪ್ರಕಾರ, ಈ ಸ್ಥಳದಲ್ಲಿ ದೇವರು ಸ್ವಯಂಭುವಾಗಿ ಪ್ರತ್ಯಕ್ಷನಾಗಿ ಭಕ್ತರಿಗೆ ಆಶೀರ್ವಾದ ನೀಡಿದನೆಂದು ನಂಬಲಾಗಿದೆ. ಈ ಕಾರಣದಿಂದಲೇ ಭಕ್ತರು ದೂರದೂರಿನಿಂದ ಇಲ್ಲಿ ಬಂದು ದೇವರ ದರ್ಶನ ಪಡೆದುಕೊಳ್ಳುತ್ತಾರೆ.

ದೇವಾಲಯದ ಮುಖ್ಯ ಆಕರ್ಷಣೆಯಾಗಿ ಇಲ್ಲಿ ನಡೆಯುವ ವಾರ್ಷಿಕ ಜಾತ್ರೆ ಉಖನೀಯವಾಗಿದೆ. ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ನಡೆಯುವ ರಥೋತ್ಸವವು ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಈ ಸಂದರ್ಭದಲ್ಲಿ ಭಕ್ತರು ಹರಕೆಗಳನ್ನು ತೀರಿಸಿಕೊಂಡು, ದೇವರ ಆಶೀರ್ವಾದ ಪಡೆಯುತ್ತಾರೆ. ಭಜನೆ, ಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜಾತ್ರೆಯ ವೈಭವವನ್ನು ಹೆಚ್ಚಿಸುತ್ತವೆ.
ಮಂಜುಗುಣಿ ಪ್ರದೇಶವು ಪ್ರಕೃತಿ ಸೌಂದರ್ಯದಿಂದ ಕೂಡಿದ್ದು, ಸುತ್ತಮುತ್ತಲಿನ ಬೆಟ್ಟಗಳು ಮತ್ತು ಅರಣ್ಯಗಳು ಪ್ರವಾಸಿಗರ ಗಮನ ಸೆಳೆಯುತ್ತವೆ. ದೇವಾಲಯಕ್ಕೆ ಹೋಗುವ ದಾರಿಯ ಕಾಣುವ ಹಸಿರು ಪರಿಸರವು ಮನಸ್ಸಿಗೆ ಹಿತಕರ ಅನುಭವವನ್ನು ನೀಡುತ್ತದೆ. ಇದು ಧಾರ್ಮಿಕ ಸ್ಥಳವಾಗಿರುವುದರ ಜೊತೆಗೆ ಪ್ರಕೃತಿ ಪ್ರಿಯರಿಗೂ ಸೂಕ್ತವಾದ ಪ್ರವಾಸಿ ತಾಣವಾಗಿದೆ. ಇಂದು ಮಂಜುಗುಣಿ ದೇವಾಲಯವು ಕೇವಲ ಧಾರ್ಮಿಕ ಕೇಂದ್ರವಲ್ಲ, ಆದರೆ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ. ಇಲ್ಲಿ ನಡೆಯುವ ಆಚರಣೆಗಳು ಮತ್ತು ಸಂಪ್ರದಾಯಗಳು ನಮ್ಮ ಪೂರ್ವಿಕರ ನಂಬಿಕೆಗಳನ್ನು ಪ್ರತಿಬಿಂಬಿಸುತ್ತವೆ. ಭಕ್ತಿಯೊಂದಿಗೆ ಪ್ರಕೃತಿಯ ಸೌಂದರ್ಯವನ್ನು ಒಂದೇ ಜಗದಲ್ಲಿ ಅನುಭವಿಸಬೇಕೆಂದರೆ ಮಂಜುಗುಣಿ ದೇವಾಲಯವೇ ಅತ್ಯುತ್ತಮ ತಾಣವಾಗಿದೆ.
