ಬುಧವಾರ - 18 ನವೆಂಬರ್ 2026
ದೇವಸ್ಥಾನಗಳು

ಆದಿ ಶಂಕರರ ದಿವ್ಯ ಪೀಠ…

ಸಂಪಾದಕೀಯ ತಂಡ August 15, 20263 ನಿಮಿಷ ಓದು
ಆದಿ ಶಂಕರರ ದಿವ್ಯ ಪೀಠ…

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಹಸಿರು ಮಡಿಲಿನಲ್ಲಿ, ತುಂಗಾ ನದಿಯ ತೀರದಲ್ಲಿ ನೆಲೆಸಿರುವ ಶೃಂಗೇರಿ ಶ್ರೀ ಶಾರದಾಂಬಾ ದೇವಾಲಯ ಭಾರತೀಯ ಆಧ್ಯಾತ್ಮಿಕ ಪರಂಪರೆಯ ಅಪರೂಪದ ರತ್ನವಾಗಿದೆ. ಜ್ಞಾನ, ವಿದ್ಯೆ, ಭಕ್ತಿ ಮತ್ತು ಸಂಸ್ಕೃತಿಯ ಸಂಕೇತವಾಗಿ ಪ್ರಸಿದ್ಧಿ ಪಡೆದಿರುವ ಈ ದೇವಾಲಯವು ಕೇವಲ ಪೂಜಾ ಸ್ಥಳವಷ್ಟೇ ಅಲ್ಲ, ಸಾವಿರಾರು ವರ್ಷಗಳ ಇತಿಹಾಸ, ಪುರಾಣ ಮತ್ತು ತತ್ವeನದ ಜೀವಂತ ನೆನಪು ಕೂಡ ಹೌದು.
ಶೃಂಗೇರಿ ಎಂಬ ಹೆಸರು ಕೇಳಿದಾಗ ಮೊದಲು ಮನಸ್ಸಿಗೆ ಬರುವುದು ಜಗದ್ಗುರು ಆದಿ ಶಂಕರಾಚಾರ್ಯರು. ಕ್ರಿ.ಶ. ೮ನೇ ಶತಮಾನದಲ್ಲಿ ಭಾರತವನ್ನು ಸುತ್ತಿ ಸಂಚರಿಸಿದ ಅವರು, ಧರ್ಮ, ತತ್ವಜ್ಞಾನ ಮತ್ತು ವೇದಾಂತದ ಬೆಳಕನ್ನು ದೇಶದ ಮೂಲೆಮೂಲೆಗೂ ಹರಡಿದರು. ಆ ಸಂದರ್ಭದಲ್ಲಿ ಅವರು ತುಂಗಾ ನದಿಯ ತೀರಕ್ಕೆ ಬಂದಾಗ, ಒಂದು ಅದ್ಭುತ ದೃಶ್ಯವನ್ನು ಕಂಡರೆಂದು ಹೇಳಲಾಗುತ್ತದೆ.
ಭಾರೀ ಮಳೆಯಲ್ಲಿ ಒಂದು ಹಾವು ತನ್ನ ಫಣೆಯನ್ನು ಹರಡಿ, ಹೆರಿಗೆ ನೋವಿನಿಂದ ಬಳಲುತ್ತಿದ್ದ ಕಪ್ಪೆಗೆ ನೆರಳು ನೀಡುತ್ತಿದ್ದ ದೃಶ್ಯ ಅವರನ್ನು ಆಳವಾಗಿ ಸ್ಪರ್ಶಿಸಿತು. ಪ್ರಕೃತಿ ಯಲ್ಲಿಯೇ ದಯೆ, ಕರುಣೆ ಮತ್ತು ಸಹಜ ಸಹಜೀವನದ ಸಂದೇಶ ಅಡಗಿದೆ ಎಂಬ ಅರಿವಿ ನಿಂದ, ಈ ಸ್ಥಳವು ತಪಸ್ಸು ಮತ್ತು ವಿದ್ಯಾಭ್ಯಾಸಕ್ಕೆ ಅತ್ಯಂತ ಪವಿತ್ರವಾದ ತಾಣವೆಂದು ಅವರು ಗುರುತಿಸಿದರು. ಹೀಗೆ ಶೃಂಗೇರಿಯಲ್ಲಿ ಶಾರದಾ ಪೀಠ ಸ್ಥಾಪನೆಯಾಯಿತು.


ಶೃಂಗೇರಿಯ ಪೌರಾಣಿಕ ಮಹತ್ವವೂ ವಿಶೇಷವಾಗಿದೆ. ಪುರಾಣಗಳ ಪ್ರಕಾರ ಈ ಪ್ರದೇಶವನ್ನು ಋಷ್ಯಶೃಂಗ ಮಹರ್ಷಿಗಳ ತಪೋಭೂಮಿ ಎಂದು ಪರಿಗಣಿಸಲಾಗುತ್ತದೆ. ಅವರ ಹೆಸರಿನಿಂದಲೇ ಶೃಂಗೇರಿ ಎಂಬ ಹೆಸರು ಬಂದಿದೆ ಎಂಬ ನಂಬಿಕೆ ಇದೆ. ರಾಮಾಯಣದಲ್ಲಿಯೂ ಋಷ್ಯಶೃಂಗರ ಉಖ ದೊರೆಯುತ್ತದೆ. ಅವರ ತಪಸ್ಸಿನ ಶಕ್ತಿ, ಪಾವಿತ್ರ ಮತ್ತು ವೇದeನದ ಕಿರಣಗಳು ಈ ಭೂಮಿಯನ್ನು ಪವಿತ್ರಗೊಳಿಸಿವೆ ಎಂದು ಭಕ್ತರು ಭಾವಿಸುತ್ತಾರೆ. ಆದ್ದರಿಂದ ಶೃಂಗೇರಿ ಕೇವಲ ಒಂದು ಕ್ಷೇತ್ರವಲ್ಲ, ಋಷಿ ಪರಂಪರೆ ಮತ್ತು ವೇದ ಸಂಸ್ಕೃತಿಯ ನೆಲೆಬೀಡಾಗಿದೆ.
ಇಲ್ಲಿನ ಮುಖ್ಯ ದೇವತೆ ಶ್ರೀ ಶಾರದಾಂಬೆ. ಶಾರದಾ ಎಂದರೆ ವಿದ್ಯೆಯ, eನದ ಮತ್ತು ವಾಗ್ದೇವಿಯ ರೂಪವಾದ ಸರಸ್ವತಿ. ಆರಂಭದಲ್ಲಿ ಆದಿ ಶಂಕರರು ದೇವಿಯನ್ನು ಚಂದನದ ಮೂರ್ತಿಯಾಗಿ ಪ್ರತಿಷ್ಠಾಪಿಸಿದರೆಂದು ಹೇಳಲಾಗುತ್ತದೆ. ನಂತರದ ಕಾಲದಲ್ಲಿ ಅದನ್ನು ಸ್ವರ್ಣಮಯ ವಿಗ್ರಹವಾಗಿ ಪ್ರತಿಷ್ಠಾಪಿಸಲಾಯಿತು. ಶಾರದಾಂಬೆಯನ್ನು ಬಿಳಿ ವಸ್ತ್ರಧಾರಿಣಿ, ಜ್ಞಾನ ಮುದ್ರೆಯೊಂದಿಗೆ ಕರುಣೆಯ ಕಣ್ಣಿನಿಂದ ಭಕ್ತರನ್ನು ಕಾಪಾಡುವ ತಾಯಿಯಾಗಿ ಆರಾಧಿಸಲಾಗುತ್ತದೆ. ವಿದ್ಯಾರ್ಥಿಗಳು, ಕಲಾವಿದರು, ಪಂಡಿತರು, ಸಂಗೀತಾಸಕ್ತರು ಹಾಗೂ ವಿದ್ಯಾಭ್ಯಾಸದಲ್ಲಿ ಯಶಸ್ಸನ್ನು ಬಯಸುವ ಅನೇಕರು ಶಾರದಾಂಬೆಯ ದರ್ಶನಕ್ಕೆ ಬಂದು ಆಶೀರ್ವಾದ ಪಡೆಯುತ್ತಾರೆ.
ಶೃಂಗೇರಿ ಮಠದ ಇತಿಹಾಸವು ಭಾರತೀಯ ಸಂಸ್ಕೃತಿಯ ವೈಭವವನ್ನು ಸಾರುತ್ತದೆ. ಇದು ಆದಿ ಶಂಕರರು ಸ್ಥಾಪಿಸಿದ ನಾಲ್ಕು ಪ್ರಮುಖ ಪೀಠಗಳಲ್ಲಿ ದಕ್ಷಿಣದ ಪೀಠವೆಂದು ಪ್ರಸಿದ್ಧ. ಇಲ್ಲಿ ವೇದ, ಉಪನಿಷತ್ತು, ಶಾಸ್ತ್ರ, ತತ್ವಶಾಸ್ತ್ರ ಮತ್ತು ಸಂಸ್ಕೃತ ವಿದ್ಯಾಭ್ಯಾಸಕ್ಕೆ ಶತಮಾನಗಳಿಂದ ಉತ್ತೇಜನ ದೊರಕುತ್ತಿದೆ. ಅನೇಕ ಜಗದ್ಗುರುಗಳು ಈ ಪೀಠವನ್ನು ಅಲಂಕರಿಸಿ, ಧರ್ಮರಕ್ಷಣೆ ಮತ್ತು eನಪ್ರಚಾರದ ಮಹತ್ಕಾರ್ಯಗಳನ್ನು ಮಾಡಿದ್ದಾರೆ. ವಿಜಯನಗರ ಸಾಮ್ರಾಜ್ಯದ ರಾಜರು ಸೇರಿದಂತೆ ಅನೇಕ ರಾಜವಂಶಗಳು ಈ ಮಠಕ್ಕೆ ಆಶ್ರಯ ನೀಡಿ, ದೇವಾಲಯದ ವಿಸ್ತರಣೆ ಮತ್ತು ಅಭಿವೃದ್ಧಿಗೆ ಕೈಜೋಡಿಸಿದ್ದವು ಎಂಬ ಇತಿಹಾಸ ದೊರೆಯುತ್ತದೆ.
ಶೃಂಗೇರಿಯ ದೇವಾಲಯ ಸಮೂಹದಲ್ಲಿ ಶಾರದಾಂಬಾ ದೇವಾಲಯದ ಜೊತೆಗೆ ವಿದ್ಯಾಶಂಕರ ದೇವಾಲಯ ಕೂಡ ವಿಶೇಷ ಆಕರ್ಷಣೆಯಾಗಿದೆ. ಹೊಯ್ಸಳ, ದ್ರಾವಿಡ ಮತ್ತು ವಿಜಯನಗರ ಶೈಲಿಗಳ ಸೊಗಡನ್ನು ಹೊತ್ತಿರುವ ಈ ದೇವಾಲಯವು ಶಿಲ್ಪಕಲೆಯ ಅದ್ಭುತ ನಿದರ್ಶನವಾಗಿದೆ. ಕಲ್ಲಿನ ಸ್ತಂಭಗಳು, ನಿಖರವಾದ ಕೆತ್ತನೆಗಳು, ಜ್ಯೋತಿಷ್ಯ ಮತ್ತು ಕಾಲಗಣನೆಯ ಸಂಕೇತಗಳನ್ನು ಒಳಗೊಂಡಿರುವ ಈ ನಿರ್ಮಾಣವು ಭಕ್ತರಷ್ಟೇ ಅಲ್ಲ, ಇತಿಹಾಸಾಸಕ್ತರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ.
ಶಾರದಾಂಬೆಯ ಆರಾಧನೆ ಶೃಂಗೇರಿಯಲ್ಲಿ ಕೇವಲ ನಿತ್ಯಪೂಜೆಗೆ ಸೀಮಿತವಾಗಿಲ್ಲ. ನವರಾತ್ರಿ ಉತ್ಸವ ಇಲ್ಲಿ ಅತ್ಯಂತ ವೈಭವದಿಂದ ನಡೆಯುತ್ತದೆ. ಆ ದಿನಗಳಲ್ಲಿ ದೇವಿಯನ್ನು ವಿಭಿನ್ನ ಅಲಂಕಾರಗಳಲ್ಲಿ ದರ್ಶನ ಮಾಡಿಸಲಾಗುತ್ತದೆ. ಭಕ್ತರ ಭಜನೆ, ವೇದಘೋಷ, ಪೂಜೆ, ಹೋಮ-ಹವನಗಳು ಮತ್ತು ದೀಪಾಲಂಕಾರದಿಂದ ಶೃಂಗೇರಿ ಆಧ್ಯಾತ್ಮಿಕ ಕಂಗೊಳಿನಿಂದ ಕಂಗೊಳಿಸುತ್ತದೆ. ತುಂಗಾ ನದಿಯ ತೀರದಲ್ಲಿ ಹರಡುವ ಆ ದಿವ್ಯ ವಾತಾವರಣ ಭಕ್ತರ ಮನಸ್ಸಿಗೆ ಶಾಂತಿ ಮತ್ತು ಪಾವಿತ್ರ್ಯದ ಅನುಭವವನ್ನು ನೀಡುತ್ತದೆ.
ಇಂದಿನ ವೇಗದ ಯುಗದಲ್ಲಿಯೂ ಶೃಂಗೇರಿ ಶ್ರೀ ಶಾರದಾಂಬಾ ದೇವಾಲಯ ತನ್ನ ಪಾವಿತ್ರ್ಯ, ಪರಂಪರೆ ಮತ್ತು eನಸಂಸ್ಕೃತಿಯನ್ನು ಅಕ್ಷುಣ್ಣವಾಗಿ ಉಳಿಸಿಕೊಂಡಿದೆ. ಇಲ್ಲಿ ಬರುವ ಪ್ರತಿಯೊಬ್ಬರೂ ದೇವಿಯ ಕೃಪೆಯ ಜೊತೆಗೆ ಭಾರತದ ಆಧ್ಯಾತ್ಮಿಕ ಪರಂಪರೆಯ ಆಳವನ್ನು ಅನುಭವಿಸುತ್ತಾರೆ. ಶೃಂಗೇರಿ ನಮಗೆ ತಿಳಿಸುವ ದೊಡ್ಡ ಸಂದೇಶ ಏನೆಂದರೆ ಜ್ಞಾನವೇ ದೈವ, ಭಕ್ತಿಯೇ ಬದುಕಿನ ಬೆಳಕು, ಸಂಸ್ಕೃತಿಯೇ ನಮ್ಮ ಆತ್ಮ. ಅದಕ್ಕಾಗಿಯೇ ಶೃಂಗೇರಿ ಶ್ರೀ ಶಾರದಾಂಬಾ ದೇವಾಲಯ ಭಕ್ತರ ಮನದಲ್ಲಿ ಕೇವಲ ದೇವಾಲಯವಲ್ಲ, ಜ್ಞಾನತಾಯಿಯ ಶಾಶ್ವತ ಸನ್ನಿಧಿಯಾಗಿ ಉಳಿದಿದೆ.

ಲೇಖನ : ಸನ್ನಿಧಿ,
ಮುಖ್ಯ ಸಂಪಾದಕರು,
ನಿಸರ್ಗ ಸನ್ನಿಧಿ.


ಹಂಚಿಕೊಳ್ಳಿ ಆದಿ ಶಂಕರರ ದಿವ್ಯ ಪೀಠ… ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ.
ಸನ್ನಿಧಿ ವಿ.

ನಿಸರ್ಗ ಸನ್ನಿಧಿ ಸಂಪಾದಕೀಯ ತಂಡ

ಪ್ರಕೃತಿ, ಪರಿಸರ, ಸಂಸ್ಕೃತಿ ಮತ್ತು ಪರಂಪರೆಯ ಜ್ಞಾನವನ್ನು ಸರಳ ಮತ್ತು ಜವಾಬ್ದಾರಿಯುತ ಕನ್ನಡದಲ್ಲಿ ಓದುಗರಿಗೆ ತಲುಪಿಸುವ ಪ್ರಯತ್ನ.

ನಿಮ್ಮ ಪ್ರತಿಕ್ರಿಯೆ ಬರೆಯಿರಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ.

ಮುಂದೆ ಓದಿ

ಸಂಬಂಧಿತ ಲೇಖನಗಳು

ಧನ್ತೇರಸ್ ಹಬ್ಬ ಅಂದ್ರೆ ಏನಿರಬಹುದು?
ದೇವಸ್ಥಾನಗಳು

ಧನ್ತೇರಸ್ ಹಬ್ಬ ಅಂದ್ರೆ ಏನಿರಬಹುದು?

November 3, 20262 ನಿಮಿಷ ಓದು

ವಿಶೇಷವಾದ ಕೇರಳ  ಧನ್ತೇರಸ್ ಹಬ್ಬ.ಧನ್ವಂತ್ರಿಯ ಬಗ್ಗೆ ಹೆಚ್ಚು ಹೆಚ್ಚು ಓದಿದಾಗ ಧನ್ತೇರಸ್ (ಧನ್ತ್ರಯೋದಶಿ, ದೀಪಾವಳಿಗೆ ಎರಡು ದಿನಗಳ ಮೊದಲು) ಕೂಡ ಧನ್ವಂತ್ರಿ ಜಯಂತಿ ಎಂದು ತಿಳಿದುಬಂದಿತು. ಧನ್ವಂತ್ರಿ ಔಷಧದ ದೇವರು. ಇತರ ಸಂಪತ್ತುಗಳೊಂದಿಗೆ…

ಪೂರ್ಣ ಲೇಖನ →
ದೀಪಾವಳಿಯಂದು ಕತ್ತಲೆಯಲ್ಲಿರುವ ಊರು!
ದೇವಸ್ಥಾನಗಳು

ದೀಪಾವಳಿಯಂದು ಕತ್ತಲೆಯಲ್ಲಿರುವ ಊರು!

November 2, 20264 ನಿಮಿಷ ಓದು

ದೇಶದಾದ್ಯಂತ ದೀಪಾವಳಿಯಂದು ಕೋಟ್ಯಂತರ ದೀಪಗಳು ಬೆಳಗುತ್ತವೆ. ಮನೆಮನೆಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡುತ್ತದೆ. ಆದರೆ ಕರ್ನಾಟಕದ ಮಂಡ್ಯ ಜಿಲ್ಲೆಯ ಮೇಲುಕೋಟೆಯ ಕೆಲವು ಅಯ್ಯಂಗಾರ್ ಕುಟುಂಬಗಳಲ್ಲಿ ದೀಪಾವಳಿಯು ಸಂತೋಷದ ಹಬ್ಬಕ್ಕಿಂತಲೂ ನೋವಿನ ನೆನಪನ್ನು ಹೊತ್ತು ತರುವ…

ಪೂರ್ಣ ಲೇಖನ →
ಚಾಕೊಲೇಟ್ ಅರ್ಪಿಸುವ ವಿಶಿಷ್ಟ ದೇವಾಲಯ ಕೇರಳದ ಅಲ್ಪುಝಾ
ದೇವಸ್ಥಾನಗಳು

ಚಾಕೊಲೇಟ್ ಅರ್ಪಿಸುವ ವಿಶಿಷ್ಟ ದೇವಾಲಯ ಕೇರಳದ ಅಲ್ಪುಝಾ

September 16, 20264 ನಿಮಿಷ ಓದು

ದೇವಾಲಯ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಹೂವು, ಹಣ್ಣು, ತೆಂಗಿನಕಾಯಿ, ಪಂಚಾಮೃತ, ಲಡ್ಡು, ಪಾಯಸ ಮುಂತಾದ ಸಾಂಪ್ರದಾಯಿಕ ನೈವೇದ್ಯಗಳು ನೆನಪಾಗುತ್ತವೆ. ಆದರೆ ಕೇರಳದ ಅಲ್ಪುಝಾ ಜಿಯಲ್ಲಿರುವ ಒಂದು ದೇವಾಲಯಕ್ಕೆ ಹೋದರೆ ಭಕ್ತರಿಗೆ ಎದುರಾಗುವ…

ಪೂರ್ಣ ಲೇಖನ →
ವಾಟ್ಸಾಪ್ ಗುಂಪಿಗೆ ಸೇರಿ
Translate »