ಶನಿವಾರ - 5 ಸೆಪ್ಟೆಂಬರ್ 2026

ನಿಸರ್ಗ ಸನ್ನಿಧಿಯ ಪರಿಚಯ

ಪ್ರಕೃತಿ ಪ್ರೀತಿ, ಪರಿಸರ ಜಾಗೃತಿ, ಸ್ಥಳೀಯ ಪರಂಪರೆ ಮತ್ತು ಜನಜ್ಞಾನದ ನಡುವೆ ಹೊಸ ತಲೆಮಾರಿಗೆ ಸೇತುವೆ ನಿರ್ಮಿಸುವ ಕನ್ನಡ ವೇದಿಕೆ.

ಪಶ್ಚಿಮ ಘಟ್ಟದ ಪ್ರಕೃತಿ ಸಂರಕ್ಷಣೆ
ಪ್ರಕೃತಿ
ಪರಿಸರ
ಜನಜಾಗೃತಿ
ನಮ್ಮ ಬಗ್ಗೆ

ನಿಸರ್ಗವನ್ನು ಜನಮನಕ್ಕೆ ಹತ್ತಿರ ತರುವ ಸಂಕಲ್ಪ

ನಿಸರ್ಗ ಸನ್ನಿಧಿಯ ಮೂಲ ಧ್ಯೇಯ ಪ್ರಕೃತಿಯ ನೈಸರ್ಗಿಕ ಸೌಂದರ್ಯವನ್ನು ಸಂರಕ್ಷಿಸಿ, ಜನರನ್ನು ಅದರೊಂದಿಗೆ ಇನ್ನಷ್ಟು ಹತ್ತಿರವಾಗಿಸಲು ಪ್ರೇರೇಪಿಸುವುದಾಗಿದೆ. ನಮ್ಮ ವಿವಿಧ ಸೇವೆಗಳು ಹಾಗೂ ಕಾರ್ಯಕ್ರಮಗಳ ಮೂಲಕ ಪರಿಸರ ಸಂರಕ್ಷಣೆ, ಆರೋಗ್ಯಕರ ಜೀವನಶೈಲಿ ಮತ್ತು ನೈಸರ್ಗಿಕ ಜೀವನ ಮೌಲ್ಯಗಳನ್ನು ಉತ್ತೇಜಿಸುವಲ್ಲಿ ನಾವು ಬದ್ಧರಾಗಿದ್ದೇವೆ.

ಇದರ ಜೊತೆಗೆ ದೇವಸ್ಥಾನಗಳು, ಪ್ರೇಕ್ಷಣೀಯ ಸ್ಥಳಗಳು, ಔಷಧೀಯ ಸಸ್ಯಗಳು, ಪಕ್ಷಿಜಗತ್ತು ಮತ್ತು ನಮ್ಮ ಸಮೃದ್ಧ ಪರಂಪರೆಯ ಕುರಿತು ಜಾಗೃತಿ ಮೂಡಿಸಿ ಮತ್ತಷ್ಟು ಹೆಚ್ಚು ಓದುಗರನ್ನು ತಲುಪುವ ಉದ್ದೇಶದಿಂದ ಈ ವೆಬ್ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಸಹಕಾರ, ಹಾರೈಕೆ ಸದಾ ಇರಲಿ.

  • ಪರಿಸರ ಸಂರಕ್ಷಣೆ ಮತ್ತು ಆರೋಗ್ಯಕರ ಜೀವನಶೈಲಿಗೆ ಪ್ರೇರಣೆ
  • ಔಷಧೀಯ ಸಸ್ಯ, ಪಕ್ಷಿಜಗತ್ತು ಮತ್ತು ಸ್ಥಳೀಯ ನಿಸರ್ಗದ ಪರಿಚಯ
  • ದೇವಸ್ಥಾನ, ಜನಪದ, ಸಂಸ್ಕೃತಿ ಮತ್ತು ಪರಂಪರೆಯ ದಾಖಲಾತಿ
  • ಸರಳ, ಸ್ಪಷ್ಟ ಮತ್ತು ಪರಿಣಾಮಕಾರಿ ಕನ್ನಡ ವಿಷಯ
ಮುಖ್ಯ ಸಂಪಾದಕಿ ಸನ್ನಿಧಿ ವಿ.
ಮುಖ್ಯ ಸಂಪಾದಕಿ

ಸನ್ನಿಧಿ ವಿ.

ಸಾಮಾಜಿಕ ಕಾರ್ಯಕರ್ತೆ ಹಾಗೂ ಯುವ ಲೇಖಕಿ ಸನ್ನಿಧಿ ವಿ. ಅವರು ಚಿಕ್ಕ ವಯಸ್ಸಿನಿಂದಲೇ ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಕಳೆದ ಸುಮಾರು ಆರು ವರ್ಷಗಳಿಂದ ಪರಿಸರ ಕಾರ್ಯಕರ್ತೆಯಾಗಿ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇದರೊಂದಿಗೆ ಔಷಧೀಯ ಸಸ್ಯಗಳು, ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ನೈಸರ್ಗಿಕ ಜೀವನ ಮೌಲ್ಯಗಳ ಕುರಿತು ಆಳವಾದ ಅಧ್ಯಯನವನ್ನೂ ಮಾಡುತ್ತಿದ್ದಾರೆ.

ಇವರ ಮಹತ್ವಾಕಾಂಕ್ಷಿ ಪ್ರಯತ್ನವಾದ ನಿಸರ್ಗ ಸನ್ನಿಧಿ ವೆಬ್‌ಸೈಟ್ ಸ್ಥಳೀಯ ಪರಂಪರೆ, ನೈಸರ್ಗಿಕ ಸಂಪತ್ತು, ಸಂಪ್ರದಾಯಗಳು ಹಾಗೂ ಜನಪದ ನಂಬಿಕೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ವಿಶಿಷ್ಟ ವೇದಿಕೆಯಾಗಿ ಹೊರಹೊಮ್ಮುತ್ತಿದೆ. ಇಂದಿನ ವೇಗದ ಮತ್ತು ಆಧುನಿಕ ಯುಗದಲ್ಲಿ ಮರೆಯಾಗುತ್ತಿರುವ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಮಹತ್ವವನ್ನು ಹೊಸ ತಲೆಮಾರಿಗೆ ಪರಿಚಯಿಸುವ ಸೇತುವೆಯಾಗಿ ಈ ವೆಬ್‌ಸೈಟ್ ಕಾರ್ಯನಿರ್ವಹಿಸಲಿದೆ.

ಸಮಾಜದ ವಿವಿಧ ಆಯಾಮಗಳನ್ನು ಸರಳ, ಸ್ಪಷ್ಟ ಹಾಗೂ ಪರಿಣಾಮಕಾರಿ ರೀತಿಯಲ್ಲಿ ಜನರಿಗೆ ತಲುಪಿಸುವ ಉದ್ದೇಶದಿಂದ ರೂಪುಗೊಳ್ಳುತ್ತಿರುವ ನಿಸರ್ಗ ಸನ್ನಿಧಿಯು, ನಿಸರ್ಗ ಪ್ರೀತಿ, ಸಂಸ್ಕೃತಿ ಸಂರಕ್ಷಣೆ ಮತ್ತು ಪರಂಪರೆಯ ಮೌಲ್ಯಗಳನ್ನು ಉಳಿಸಿ ಬೆಳೆಸುವ ಮಹತ್ತರ ಕಾರ್ಯಕ್ಕೆ ಹೆಜ್ಜೆಯಿಡುತ್ತಿದೆ. ಈ ಉತ್ತಮ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ ಮತ್ತು ಪ್ರೋತ್ಸಾಹ ಅತ್ಯಂತ ಅಗತ್ಯವಾಗಿದೆ.

ನಿಸರ್ಗ ಸನ್ನಿಧಿ ಜನಮನ ತಲುಪಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಶಕ್ತಿಯುತ ವೇದಿಕೆಯಾಗಲಿ. ನಿಸರ್ಗ ಸನ್ನಿಧಿಯೊಂದಿಗೆ ಫೇಸ್‌ಬುಕ್, ಯೂಟ್ಯೂಬ್ ಮತ್ತು ಎಕ್ಸ್ ಮೂಲಕವೂ ಸಂಪರ್ಕದಲ್ಲಿರಬಹುದು.

ನಮ್ಮ ಮೌಲ್ಯಗಳು

ನಾವು ಅನುಸರಿಸುವ ಸಂಪಾದಕೀಯ ದಿಕ್ಕು

ವಿಶ್ವಾಸಾರ್ಹ ಮಾಹಿತಿ

ಪರಿಶೀಲಿತ ಮೂಲ, ಸ್ಥಳೀಯ ಅನುಭವ ಮತ್ತು ಜವಾಬ್ದಾರಿಯುತ ಭಾಷೆಯೊಂದಿಗೆ ವಿಷಯ ಪ್ರಕಟಣೆ.

ಪ್ರಕೃತಿ ಮೊದಲ ಆದ್ಯತೆ

ಪ್ರತಿ ಲೇಖನದಲ್ಲೂ ಪರಿಸರದ ಗೌರವ, ಸಂರಕ್ಷಣೆ ಮತ್ತು ದೀರ್ಘಕಾಲಿಕ ಚಿಂತನೆ.

ಸ್ಥಳೀಯ ಪರಂಪರೆಗೆ ವೇದಿಕೆ

ಊರು, ಹಿರಿಯರು, ಕಲಾವಿದರು ಮತ್ತು ಸ್ಥಳೀಯ ಜ್ಞಾನದ ಧ್ವನಿಯನ್ನು ಹೊಸ ಓದುಗರಿಗೆ ತಲುಪಿಸುವುದು.

ನಮ್ಮ ಪ್ರಯತ್ನಕ್ಕೆ ನಿಮ್ಮ ಸಹಕಾರ ಇರಲಿ

ಸ್ಥಳೀಯ ಮಾಹಿತಿ, ಲೇಖನ, ಚಿತ್ರ ಅಥವಾ ಸಹಯೋಗದ ಪ್ರಸ್ತಾವನೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ವಾಟ್ಸಾಪ್ ಗುಂಪಿಗೆ ಸೇರಿ
Translate »